Tuesday, August 9, 2022

Latest Posts

ಗೋಧಿ ಹುಲ್ಲಲ್ಲಿ ಕಲೆಯರಳಿಸುವ ದಿವ್ಯಾಂಗ ಪ್ರತಿಭೆ

  • ಕಾವ್ಯಾ ಜಕ್ಕೊಳ್ಳಿ

ದೈಹಿಕವಾಗಿ ಸದೃಢವಾಗಿದ್ದರೂ ಅದರಲ್ಲಿಯೇ ನ್ಯೂನತೆ ಹುಡುಕುತ್ತಾ ತೆರೆದ ಸಮಾಜದಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಿರುವವ ಮಧ್ಯೆ ಇಲ್ಲೊಬ್ಬ ವಿಶೇಷ ವ್ಯಕ್ತಿ ಇದ್ದಾರೆ.

ಇವರು ಮಹಾರಾಷ್ಟ್ರದ ರಾಜನ್ ಗಾವಡೆ. ಇವರಿಗೆ ಹುಟ್ಟಿನೊಂದಿಗೆ ಜೊತೆಗಂಟಿ ಬಂದಿದ್ದು ಕಿವುಡುತನ. ಆದರೆ ರಾಜನ್‌ ಎಂದಿಗೂ ’ಇದು ತನ್ನ ಬದುಕನ್ನೆ ಕಿತ್ತುಕೊಳ್ಳು ವೈಫಲ್ಯ’ ಎಂದು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ತನ್ನಲ್ಲಿರುವ ಶ್ರವಣದೋಷವನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯ ಮೆಟ್ಟಿಲು ಏರಿದ್ದಾರೆ.

ರಾಜನ್ ಪ್ರಾಜೆಕ್ಟ್ ಆರ್ಟಿಸ್ಟ್‌ನ ಮಾಲೀಕರು. ಗೋಧಿ ಹುಲ್ಲಿನಿಂದ ಕಲಾಕೃತಿ ತಯಾರಿಸುವಲ್ಲಿ ಭಾರೀ ನಿಪುಣರು. ಅಷ್ಟೇ ಅಲ್ಲ ಥರ್ಮಾಕೋಲ್ ಬಳಸಿ ಡೆಕೋರೇಟ್ ಮಾಡುವುದು, ಸೈನ್ಸ್ ಬೋರ್ಡ್ ಚಿತ್ರಿಸುವಲ್ಲಿಯೂ ಪರಿಣಿತರು.

ಮದುವೆ, ಮುಂಜಿ, ಗಣೇಶೋತ್ಸವ, ದುರ್ಗಾ ಪೂಜೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ವಿಭಿನ್ನವಾಗಿ ಡೆಕೋರೇಟ್ ಮಾಡುವ ಕೆಲಸವನ್ನೂ ಸಹ ಮಾಡುತ್ತಾರೆ. ಹಾಗೆಯೇ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಹೊಸತನ ಹೊಂದಿರುವ ರಾಜನ್ ಕನ್ಸಲ್ಟಿಂಗ್ ಮಾಡುತ್ತಾರೆ.

ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನೇಕ ಶ್ರವಣದೋಷಿಗಳಿಗೆ ರಾಜನ್ ಮಾರ್ಗದರ್ಶನ ಮಾಡುತ್ತಾರೆ. ಅದರಲ್ಲೂ ಕೆಲವರಿಗೆ ತಮ್ಮ ಪ್ರಾಜೆಕ್ಟ್ ಆರ್ಟಿಸ್ಟ್ ಸಂಸ್ಥೆಯಲ್ಲಿ ಕೆಲಸ ನೀಡಿದ್ದಾರೆ.
ಇವರು ಕಳೆದ 30 ವರ್ಷದಿಂದ ಇದೇ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದು, ಬಂದಿರುವ ಆದಾಯದಲ್ಲಿ ಮನೆ ನಡೆಸುತ್ತಾರೆ.

“ನಾನು ನನ್ನ ಕಿವುಡುತನವನ್ನು ಮೆಟ್ಟಿನಿಂತಿದ್ದೇನೆ. ಈಗ ಮಾಡುತ್ತಿರುವ ಕೆಲಸದಲ್ಲಿ ಸಂತೋಷ ಹಾಗೂ ತೃಪ್ತಿ ಹೊಂದಿದ್ದೇನೆ” ಎನ್ನುತ್ತಾರೆ ರಾಜನ್.

ಗೋಧಿ ಹುಲ್ಲಿನಿಂದ ಕಲಾಕೃತಿ ತಯಾರಿಸುವವ ಸಂಖ್ಯೆಯೂ ಕಡಿಮೆ ಮತ್ತು ಇದೊಂದು ವಿಶೇಷ ಕಲೆ ಕೂಡ. ರಾಜನ್ ಗೋಧಿ ಹುಲ್ಲಿನಿಂದ ತಯಾರಿಸಿದ ಕಲಾಕೃತಿಯನ್ನು ಮಾರಾಟ ಮಾಡುತ್ತಾರೆ. ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss