ಸಮಾಜಕ್ಕಾಗೇ ಜೀವ ಮುಡಿಪಿಟ್ಟ ಜನನಾಯಕರಿವರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:(ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ಇವರ ಹೆಸರು ಮಹೇಂದ್ರ ಮೋಹನ್‌ ಚೌಧರಿ. ಪಶ್ಚಿಮ ಅಸ್ಸಾಂನ ಅವಿಭಜಿತ ಕಮ್ರೂಪ್ ಜಿಲ್ಲೆಯ (ಈಗ ಬಾರ್ಪೇಟಾ ಜಿಲ್ಲೆ) ನಾಗಾನ್‌ನ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. 1970 ರಿಂದ 1972 ರವರೆಗೆ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಅವರು ಪಂಜಾಬ್ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.

ಮಹೇಂದ್ರ ಮೋಹನ್ ಚೌಧರಿ ಅವರು 1908 ರ ಏಪ್ರಿಲ್ 12 ರಂದು ಅವಿಭಜಿತ ಕಾಮ್ರೂಪ್ ಜಿಲ್ಲೆಯ ನಾಗಾಂನಲ್ಲಿ ಅಸ್ಸಾಮಿ ಕುಟುಂಬದಲ್ಲಿ ಜನಿಸಿದರು. ಅವರು ಕಲೆಯಲ್ಲಿ ತಮ್ಮ ಪದವಿಯನ್ನು ಪಡೆದ ತರುವಾಯ ತಮ್ಮ ಬ್ಯಾಚುಲರ್ ಆಫ್ ಲಾಸ್ ಅನ್ನು ಪೂರ್ಣಗೊಳಿಸಿದರು. ಅವರೊಬ್ಬ ಮಹಾನ್ ವ್ಯಕ್ತಿ ಮತ್ತು ನಿಜವಾದ ಗಾಂಧಿವಾದಿ. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಕ್ರಮವಾಗಿ 1932, 1941 ಮತ್ತು 1945 ರಲ್ಲಿ ಮೂರು ಬಾರಿ ಜೈಲಿಗೆ ಹೋದರು.

ಸ್ವಾತಂತ್ರ್ಯಾ ನಂತರ 1946-1952ವರೆಗೆ ಅವರು ಅಸ್ಸಾಂ ವಿಧಾನಸಭಾ ಸದಸ್ಯರಾಗಿದ್ದರು. , 1947ರಲ್ಲಿ ಸಂಸದೀಯ ಕಾರ್ಯದರ್ಶಿ , 1951, 1955 ರಲ್ಲಿರಾಜ್ಯ ಸಚಿವರು, ಅಸ್ಸಾಂ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, 1967 ರಲ್ಲಿ ಅಸ್ಸಾಂ ವಿಧಾನಸಭಾ ಅಧ್ಯಕ್ಷರು , 1959-19671ರವರೆಗೆ ಅಸ್ಸಾಂ ವಿಧಾನಸಭೆಯ ಸ್ಪೀಕರ್, 1967 -1970ಅವಧಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಾಗೂ 1970ರಿಂದ 1972ರವರೆಗೆ ಪಂಜಾಬ್ ರಾಜ್ಯಪಾಲರಾಗಿ ದೇಶಕ್ಕೆ, ರಾಜ್ಯಕ್ಕೆ, ಸಮಾಜಕ್ಕೆ ಅಪಾರ ಕೊಡಿಗೆ ನೀಡಿದ್ದಾರೆ.

ಮಹಾತ್ಮಾ ಗಾಂಧಿ ಮತ್ತು ಬಿನೋವಾ ಭಾವೆ ಅವರ ತತ್ವಶಾಸ್ತ್ರ ದ ಕುರಿತು ಪುಸ್ತಕಗಳನ್ನು ಬರೆದಿರುವುದು ಇವರ ಶ್ರೇಷ್ಟ ಸಾಧನೆಗಳಲ್ಲೊಂದು. ಅವರು ಶಂಕರದೇವ್ ಕ್ರಿಸ್ಟಿ ವಿಕಾಸ ಸಮಿತಿ, ಗೀತಾ ಸಮಾಜ, ಮಧುಪುರ್ ಸತ್ರ ಮುಂತಾದ ಅನೇಕ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದರು. ಮಹೇಂದ್ರ ಮೋಹನ್ ಚೌಧರಿ ಅವರು ಪಂಜಾಬಿನ ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಸಂತ ಶಂಕರದೇವ ಪೀಠವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಹೇಂದ್ರ ಮೋಹನ್ ಚೌಧರಿ ಅವರು 27 ಡಿಸೆಂಬರ್ 1982 ರಂದು ಹೃದಯಾಘಾತದಿಂದ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!