ನಾಯಿಗೆ ಆಹಾರ ಹಾಕಿಲ್ಲ ಎಂದು ಸಹೋದರನನ್ನೇ ಕೊಂದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಯಿಗೆ ಆಹಾರ ಹಾಕಿಲ್ಲ ಎಂದು ತನ್ನ ಸಹೋದರನನ್ನೇ ಕೊಲೆ ಮಾಡಿದ ಘಟನೆ ಕೇರಳದ ಪಾಲಕ್ಕಾಡ್‍ನಲ್ಲಿ ನಡೆದಿದೆ.

ಹರ್ಷದ್(21)ನನ್ನು ಆತನ ಸಹೋದರ ಹಕೀಂ (27) ಎಂಬಾತ ಪಾಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಕೊಲೆ ಮಾಡಿದ್ದಾನೆ.

ಹರ್ಷದ್ ಮತ್ತು ಹಕೀಂ ಪೆರುಮತ್ತೋಡಿ ಗ್ರಾಮದಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ಇದ್ದರು.ಇಬ್ಬರು ಕೇಬಲ್ ವರ್ಕ್ ಮಾಡುತ್ತಿದ್ದರು. ಇಲ್ಲಿ ಹಕೀಂ ನಾಯಿಯನ್ನು ಸಾಕಿದ್ದ. ಆ ನಾಯಿಗೆ ಆಹಾರವನ್ನು ನೀಡಿಲ್ಲ ಎಂದು ಹರ್ಷದ್‍ಗೆ ನಾಯಿ ಬೆಲ್ಟ್ ಹಾಗೂ ಮರದ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ.

ಬಳಿಕ ಗಂಭೀರ ಗಾಯಗೊಂಡಿರುವ ಹರ್ಷದ್‍ ಅನ್ನು ಹಕೀಂ ಹಾಗೂ ಆತನ ಸ್ನೇಹಿತರಿಬ್ಬರು ಹರ್ಷದ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಬಳಿಕ ಹಕೀಂ ಆಸ್ಪತ್ರೆ ವೈದ್ಯರ ಬಳಿ ಹರ್ಷದ್ ಮೇಲ್ಛಾವಣಿಯಿಂದ ಬಿದ್ದಿದ್ದರಿಂದ ಈ ರೀತಿ ಆಗಿದೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಗಂಭೀರಗಾಯಗೊಂಡಿದ್ದ ಹರ್ಷದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಕೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡ ಹಕ್ಕಿಂನನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!