spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿಝಾ ಇವರಿಗೆ ಪಾಠ ಕಲಿಸಿದೆ, ನೀವೂ ಕಲೀತಿರಾ ನೋಡಿ..

- Advertisement -Nitte

ಮನೆಕೆಲಸದವಳು ಇಂದು ಊರಿಗೆ ಹೋಗುವವಳಿದ್ದಳು. ತನ್ನ ಮಗಳ ಮನೆಗೆ, ಮೊಮ್ಮಕ್ಕಳ ಜೊತೆ ಒಂದು ವಾರ ಕಳೆಯೋದಕ್ಕೆ ತಿಂಗಳ ಹಿಂದೆಯೇ ಶಾಂತಮ್ಮ ರಜೆ ಕೇಳಿಟ್ಟಿದ್ದಳು.
‘ಶಾಂತಮ್ಮ ಬರ‍್ತಾ ಇಲ್ಲ, ಸ್ವಲ್ಪ ಬಟ್ಟೆ ಕಡಿಮೆ ಹಾಕಿ ತೊಳೆಯೋದಕ್ಕೆ’ ಎಂದು ಹೆಂಡತಿ ಹೇಳಿದ್ದಳು. ಬಟ್ಟೆ ತೊಳೆಯೋಕೆ ಶಾಂತಮ್ಮ ಇಲ್ವಲ್ಲಾ ಅಂತ ಸ್ವಲ್ಪ ಅಸಮಾಧಾನ ಇತ್ತು ಗಂಡನಿಗೆ.

ಇದರ ಜೊತೆಗೆ ‘ಶಾಂತಮ್ಮನಿಗೆ 500 ರೂ. ಬೋನಸ್ ಕೊಡ್ತೀನಿ ಆಕೆ ಊರಿಗೆ ಹೋಗಿ ಬರಲಿ. ಅಲ್ಲಿ ಖರ್ಚು ಮಾಡೋದಕ್ಕೆ ಸ್ವಲ್ಪ ದುಡ್ಡಾಗಲಿ’ ಎಂದು ಹೆಂಡತಿ ಹೇಳಿದಳು. ಅದಕ್ಕೆ ಗಂಡ ‘ಇನ್ನೇನು ಸ್ವಲ್ಪ ದಿನದಲ್ಲಿ ದೀಪಾವಳಿ ಬರುತ್ತದೆ. ಆಗ ಬೋನಸ್ ಕೊಟ್ರಾಯ್ತು’ ಎಂದ. ಅದಕ್ಕೆ ಆಕೆ ‘500 ರೂಪಾಯಿ ನಮಗೆ ಎಲ್ಲಿ ಹೋಗಿ ಎಲ್ಲಿ ಬರುತ್ತದೆ? ಇವತ್ ಸಂಜೆ ಪಿಝಾ ಪಾರ್ಟಿ ಕ್ಯಾನ್ಸಲ್ ಮಾಡಿ. ಎಂಟು ಪೀಸ್ ಪಿಝಾಗೆ ನಿಮಗೆ 500 ರೂಪಾಯಿ ಕೊಡೋಕೆ ತೊಂದರೆ ಇಲ್ಲ, ಪಾಪ ಶಾಂತಮ್ಮನಿಗೆ ಕೊಡೋಕೆ ಏನು ತೊಂದರೆ’ ಎಂದು ಹೆಂಡತಿ ರೇಗಿದಳು.

ಗಂಡನಿಗೂ ಸಿಟ್ಟು ಬಂತು, ‘ನಾನು ತಿನ್ನೋ ಪಿಝಾಗೂ ಲೆಕ್ಕ ಹಾಕೋ ಸಮಯ ಬಂದೋಯ್ತು, ನನ್ನಿಷ್ಟ ನಾ ಹೇಗಾದ್ರೂ ಖರ್ಚು ಮಾಡ್ತೀನಿ’ ಅಂತ ಹೇಳಿ ಎದ್ದು ಹೋದ.
ವಾರದ ನಂತರ ಶಾಂತಮ್ಮ ಬಂದಳು. ‘ಶಾಂತಮ್ಮ ರಜೆಯಲ್ಲಿ ಏನೇನ್ ಮಾಡಿದೆ? ಹೇಗಿತ್ತು ಮಗಳ ಮನೆ’ ಎಂದು ಈತ ಕೇಳಿದ. ಅದಕ್ಕೆ ಶಾಂತಮ್ಮ ಖುಷಿಯಿಂದ ‘ಅಮ್ಮಾವ್ರು ನನಗೆ 500 ರೂಪಾಯಿ ಬೋನಸ್ ಕೊಟ್ಟಿದ್ರು. ಇದರಿಂದ ನಾನು ಮೊಮ್ಮಗಳಿಗೆ ಬಟ್ಟೆ, ಮಗಳಿಗೆ ಬಳೆ, ಮಗನಿಗೆ ಪುಸ್ತಕ, ದೇವಸ್ಥಾನದಲ್ಲಿ ಅರ್ಚನೆ, ಬೇಕರಿಯಲ್ಲಿ ಸ್ವೀಟು, ಮತ್ತೆ ನಾನು ವಾಪಾಸಾಗುವಾಗ ಬಸ್‌ನಲ್ಲಿ ತಿನ್ನೋದಕ್ಕೆ ತಿಂಡಿ ಕೂಡ ತಗೊಂಡೆ. ಅಷ್ಟೊಂದು ದುಡ್ಡು ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದು ಹೇಳಿದಳು.

ಈಗ ಆತನಿಗೆ ಮಾತೇ ಇಲ್ಲ, ಹಣ ಖರ್ಚು ಮಾಡೋದು ದೊಡ್ಡ ವಿಷಯ ಅಲ್ಲವೇ ಅಲ್ಲ, ಆ ಹಣದಿಂದ ಬರುವ ಖುಷಿ ಬಗ್ಗೆ ಆಲೋಚಿಸಬೇಕು. ಈತನಿಗೆ ಅದು ಪಿಝಾದ ದುಡ್ಡಷ್ಟೇ. ಆದರೆ ಶಾಂತಮ್ಮ ಆ ದುಡ್ಡಿನಿಂದ ಖುಷಿಯ ಖಜಾನೆಯನ್ನೇ ಖರೀದಿ ಮಾಡಿದ್ದಳು. ಯಾರಿಗೂ ಸಹಾಯ ಮಾಡಲು ಹಿಂದೇಟು ಹಾಕಬೇಡಿ. ಕೈಲಾದ್ದನ್ನು ಖಂಡಿತಾ ಮಾಡಿ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss