Thursday, July 7, 2022

Latest Posts

ಒತ್ತುವರಿ ತೆರವುಗೊಳಿಸಿ 170 ಕೋಟಿ ರೂ. ಮೌಲ್ಯದ ಜಮೀನನ್ನು ವಶಕ್ಕೆ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಹೊಸದಿಗಂತ ವರದಿ, ಮೈಸೂರು:

ನ್ಯಾಯಾಲಯದ ಆದೇಶದಂತೆ ವ್ಯಕ್ತಿಯೊಬ್ಬರ 170 ಕೋಟಿ ರೂ. ಮೌಲ್ಯದ ಜಮೀನನ್ನು ಶುಕ್ರವಾರ ಸ್ವಾಧೀನಕ್ಕೆ ತೆಗೆದುಕೊಂಡು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಅಲ್ಲಿ ನಿರ್ಮಿಸಿದ್ದ ಎರಡು ಶೆಡ್‌ನ್ನು ಜೆಸಿಬಿ ಯಂತ್ರದಿದ ತೆರವುಗೊಳಿಸಿದರು.

ಮೈಸೂರು ಕಸಬಾ ಹೋಬಳಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಬಸವನಹಳ್ಳಿ ಗ್ರಾಮದ ನಿವಾಸಿ ಮಹದೇವಯ್ಯ ಎಂಬುವರಿಗೆ ಸೇರಿದ ಸರ್ವೇನಂ.123/1 ರಲ್ಲಿ 6-14 ಎಕರೆ ಜಮೀನನ್ನು ಪ್ರಾಧಿಕಾರವು ದಿ:23.12.1991/92 ರಂದು ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ, ಭೂಮಾಲೀಕರಿಗೆ ಪರಿಹಾರ ನೀಡಲು ಅಗತ್ಯ ದಾಖಲೆಗಳನ್ನು ಹಾಜರುಪಡಿಸದ ಕಾರಣ, ಪರಿಹಾರ ಮೊತ್ತವನ್ನು ಮಾನ್ಯ ಉಚ್ಚ ನ್ಯಾಯಾಲಯಕ್ಕೆ 4,93,551 ರೂ.ಗಳನ್ನು ಠೇವಣಿ ಇಡಲಾಗಿತ್ತು.

ಇದನ್ನು ಪ್ರಶ್ನಿಸಿ ಭೂಮಾಲೀಕರು ಉಚ್ಚ ನ್ಯಾಯಾಲಯದಲ್ಲಿ ಡ.ಬ್ಯೂ.ಪಿ.ನಂ.54485/2016 ರಂದು ಪ್ರಕರಣ ದಾಖಲಿಸಿದ್ದು, ಈ ಪ್ರಕರಣವು ಪ್ರಾಧಿಕಾರದಂತೆ ಆಗಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದನುಸಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಿರ್ದೇಶನದಂತೆ ಇಂದು ಮುಂಜಾನೆ 6 ಗಂಟೆಯಲ್ಲಿ ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ 1 ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ, ಜಮೀನನ್ನು ಪ್ರಾಧಿಕಾರದ ವಶಕ್ಕೆ ಪಡೆದು, ನಾಮಫಲಕವನ್ನು ಹಾಕಲಾಯಿತು.

ಸದರಿ ಸ್ವತ್ತಿನಲ್ಲಿ 40*60 ಅಳತೆಯ 35 ನಿವೇಶನಗಳು, 30*40 ಅಳತೆಯ 19 ನಿವೇಶನಗಳು, 20*30 ಅಳತೆಯ 64 ನಿವೇಶನಗಳು ಹಾಗೂ ಅನಿಮಿಯತ ಅಳತೆಯ 45 ನಿವೇಶನಗಳು, ಒಟ್ಟು 163 ನಿವೇಶನಗಳು ರಚನೆಯಾಗಲಿದೆ. ಸದರಿ ಸ್ವತ್ತಿನÀ ಮೌಲ್ಯ ಸುಮಾರು 170 ಕೋಟಿಗಳಾಗಿದೆ ಎಂದು ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದ್ದಾರೆ.

ಕಾರ್ಯಚರಣೆಯ ಸಂದರ್ಭದಲ್ಲಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಶಂಕರ್, ಭೂಸ್ವಾಧೀನಾಧಿಕಾರಿ ಹರ್ಷವರ್ಧನ್, ಕಾರ್ಯಪಾಲಕ ಅಭಿಯಂತರರುಗಳಾದ ಮೋಹನ್, ಸತ್ಯನಾರಾಯಣ ಜೋಷಿ, ವಲಯಾಧಿಕಾರಿಗಳಾದ ಕೆ.ಆರ್.ಮಹೇಶ್, ರವೀಂದ್ರಕುಮಾರ್, ಕಿರಣ್, ಶಿವಣ್ಣ, ನಾಗೇಶ್, ರವಿಶಂಕರ್, ಶ್ರೀ ರಾಘವೇಂದ್ರ (ವಿದ್ಯುತ್) ಹಾಗೂ ಎಲ್ಲಾ ಸಹಾಯಕ, ಕಿರಿಯ ಅಭಿಯಂತರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss