ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೂಗಿಗೆ ನಿಂಬೆರಸ ಬಿಟ್ಟರೆ ಕೊರೋನಾ ಬರೋದಿಲ್ಲ.. ಸಾಮಾಜಿಕ ಜಾಲತಾಣ ನಂಬಿ ನಿಂಬೆರಸ ಬಿಟ್ಟುಕೊಂಡ ಶಿಕ್ಷಕ ಸಾವು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಎಷ್ಟರಮಟ್ಟಿಗೆ ಭೀತಿ ಹುಟ್ಟಿಸಿದೆ ಎಂದರೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲ ವಿಷಯಗಳನ್ನು ನಿಜ ಎಂದು ನಂಬುತ್ತಿದ್ದಾರೆ.
ಮೂಗಿಗೆ ನಿಂಬೆ ರಸ ಬಿಟ್ಟುಕೊಂಡರೆ ಕೊರೋನಾ ಸುಳಿಯೋದಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಶಿಕ್ಷಕನೊಬ್ಬ ಇದನ್ನು ಟ್ರೈ ಮಾಡಿ ಒದ್ದಾಡಿ ಮೃತಪಟ್ಟಿದ್ದಾನೆ.
ರಾಯಚೂರಿನ ಸಿಂಧನೂರು ಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ ಮೃತರು. ಸಾಮಾಜಿಕ ಜಾಲತಾಣದಲ್ಲಿ ಇದನ್ನು ನೋಡಿದ ಬಸವರಾಜ ಮೂಗಿಗೆ ನಿಂಬೆ ಹನಿ ಹಿಂಡಿಕೊಂಡಿದ್ದಾರೆ. ಇದಾದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss