Wednesday, August 17, 2022

Latest Posts

ದರೋಡೆಕೋರರ ಬಂಧಿಸಲು ಪ್ರಮುಖ ಪಾತ್ರ ವಹಿಸಿದ್ದ ಅಗ್ನಿಶಾಮಕ ದಳದ ವಾಹನ ಚಾಲಕನಿಗೆ ಸನ್ಮಾನ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನಗರದ ಎಐಟಿ ವೃತ್ತ ಸಮೀಪ ಕಲ್ಯಾಣ ನಗರದಲ್ಲಿ ಶನಿವಾರ ಹಾಡಹಗಲೇ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಗ್ನಿಶಾಮಕ ದಳದ ವಾಹನ ಚಾಲಕ ಎಚ್.ಕೆ.ದೇವೇಂದ್ರಪ್ಪ ಅವರಿಗೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಎಸ್ಪಿ ಕಚೇರಿ ಸಭಾಂಗಣದಲ್ಲಿ ದೇವೇಂದ್ರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ, ಹಾರ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ನಗz ಬಹುಮಾನದ ಜೊತೆಗೆ ಪೊಲೀಸ್ ಇಲಾಖೆಯಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದರು. ಇದೇ ವೇಳೆ ಚುರುಕಿನ ಕಾರ್ಯಾಚರಣೆ ನಡೆಸಿ ಕೇವಲ 2 ಗಂಟೆ ಅವಧಿಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡವನ್ನೂ ಅಭಿನಂಸಲಾಯಿತು.
ಮನೆ ಮಾಲೀಕರ ಸಂಬಂಧಿ
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಅಕ್ಷಯ್, ಬೈಪಾಸ್ ರಸ್ತೆ ಕಲ್ಯಾಣ ನಗರದ ಬಿ.ಎಸ್.ಚಂದ್ರೇಗೌಡ ಅವರ ಮನೆಯಲ್ಲಿ ಅವರ ಪತ್ನಿ ಸರೋಜಮ್ಮ ಅವರ ಕೈಕಾಲು ಕಟ್ಟಿ ಚಿನ್ನದ ಆಭರಣ ಹಾಗೂ ನಗದು ದರೋಡೆ ಮಾಡಿ ಸಿಕ್ಕಿಬಿದ್ದಿದ್ದ ಆರೋಪಿಗಳ ಪೈಕಿ ಚಂದ್ರಕಟ್ಟೆಯ ಸಚಿನ್(23) ಚಂದ್ರೇಗೌಡ ಅವರ ಸಂಬಂಧಿಯೇ ಆಗಿದ್ದು ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ತಿಳಿಸಿದರು.
ಆತನ ಸ್ನೇಹಿತ ದಂಟರಮಕ್ಕಿಯ ಮೋಹನ್(28) ಇನ್ನೋರ್ವ ಆರೋಪಿಯಾಗಿದ್ದು, ಆಟೋ ಚಾಲಕನಾಗಿದ್ದಾನೆ. ಇಬ್ಬರೂ ಸೇರಿ 50 ಸಾವಿರ ನಗದು ಮತ್ತ 75 ಗ್ರಾಮ ಚಿನ್ನದ ಆಭÀರಣಗಳನ್ನು ದೋಚಿಕೊಂಡು ಬೈಕಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದರು. ಈ ಸಂದಭರ್À ಸ್ಥಳೀಯರು ಕೂಡ ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಅದೇ ಸಮಯಕ್ಕೆ ಬಂದ ಅಗ್ನಿಶಾಮಕ ವಾಹನದ ಚಾಲಕ ದೇವೇಂದ್ರಪ್ಪ ಸಮಯ ಪ್ರಜ್ಞೆ ಮೆರೆದು ವಾಹನದಿಂದ ಬೈಕ್ ಅಡ್ಡಗಟ್ಟಿದ್ದಾರೆ. ಇದರಿಂದ ದೃತಿಗೆಟ್ಟ ಆರೋಪಿಗಳು ಚಾಕು ಹಿಡಿದು ರಸ್ತೆಯಲ್ಲಿ ಓಡಲಾರಂಬಿಸಿದ್ದಾರೆ ಎಂದರು.
ವಿಷಯ ತಿಳಿದ ಕೂಡಲೆ ಪೆÇಲೀಸ್ ವೃತ್ತ ನಿರೀಕ್ಷಕ ವಿನೋದ್‍ಭಟ್, ಪೆÇಲೀಸ್ ನಿರೀಕ್ಷಕ ಗುರುಪ್ರಸಾದ್ ನೇತೃತ್ವದ 2 ತಂಡ ಕಾರ್ಯಚಣೆ ನಡೆಸಿ ಕೃತ್ಯ ನಡೆದ ಪ್ರದೇಶವನ್ನು ನಾಲ್ಕೂಕಡೆ ಸುತ್ತುವರಿದು ಘಟನೆ ನಡೆಡ 2 ಗಂಟೆ ಒಳಗೆ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ತಿಳಿಸಿದರು.

ಕೃತ್ಯಕ್ಕೆ ಆನ್‍ಲೈನ್ ಶಿಕ್ಷಣ

ಆರೋಪಿಗಳಿಬ್ಬರು ದರೋಡೆ ಮಾಡುವುದು ಹೇಗೆ ಎನ್ನುವ ಬಗ್ಗೆ ವಾರದ ಹಿಂದೆಯೇ ಶಾಲೆ ಮಕ್ಕಳ ರೀತಿ ಆನ್‍ಲೈನ್ ಶಿಕ್ಷಣದ ಮೂಲಕ ತರಬೇತು ಪಡೆದಿದ್ದಾರೆ. ಇದಕ್ಕಾಗಿ ಯುಟ್ಯೂಬ್ ಮೊರೆ ಹೋಗಿದ್ದರೆ. ಅದರಲ್ಲಿರುವಂತೆಯೇ ಜಾಕೆಟ್, ಶೂಗಳನ್ನು ಖರೀದಿಸಿದ್ದಾರೆ. ಬೈಕ್ ನಂಬರ್ ಪ್ಲೇಟ್ ಬದಲಾವಣೆ ಮತ್ತಿತರೆ ಪೂರ್ವ ಸಿದ್ದತೆ ನಡೆಸಿಯೇ ಈ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.

ದರೋಡೆಗಿಳಿಸಿದ ಸಾಲ

ಆರೋಪಿಗಳಿಬ್ಬರು ಸಾಲಗಾರರಾಗಿದ್ದು ಈ ಸಂಕಷ್ಟದ ಸುಳಿಯಿಂದ ಪಾರಾಗಲು ದರೊಡೆ ಮಾಡುವ ದಾರಿ ಕಂಡುಕೊಳ್ಳಲು ಕಾರಣವಾಗಿದೆ ಎನ್ನುವುದು ತನಿಖೆವೇಳೆ ಗೊತ್ತಾಗಿದೆ. ಇತ್ತೀಚೆಗೆ ಮನೆ ಮಾಲೀಕ ಚಂದ್ರೇಗೌಡ ಅವರು ಒಂದೂವರೆ ತಿಂಗಳ ಹಿಂದೆ ಸ್ವತ್ತು ಮಾರಾಟದ ವ್ಯವಹಾರ ಮಾಡಿದ್ದರು. ಇದರಿಂದ ಬಂದ ಒಂದಷ್ಟು ಹಣ ಇತ್ತು. ಈ ವಿಚಾರ ಚಂದ್ರೇಗೌಡರ ಸಂಬಂಧಿ ಆರೋಪಿ ಸಚಿನ್‍ಗೆ ಗೊತ್ತಿತ್ತು ಎಂದು ತಿಳಿಸಿದರು.

ಹೆಮ್ಮೆಯ ವಿಚಾರ

ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವ ವಿಚಾರದಲ್ಲಿ ಸ್ಥಳೀಯ ಸಾರ್ವಜನಿಕರು ಸ್ಪಂದಿಸಿರುವುದು ಹೆಮ್ಮೆಯ ವಿಚಾರ, ಅದೇ ವೇಳೆ ಅಗ್ನಿಶಾಮಕ ವಾಹನ ಚಾಲಕ ಹಾಗೂ ಪೊಲೀಸ್ ಸಿಬ್ಬಂಧಿಯ ಚುರುಕಿನ ಕಾರ್ಯಾಚರಣೆ ಸಹ ಮೆಚ್ಚುವಂತಹದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೃತ್ತ ನರೀಕ್ಷಕ ವಿನೋದ್ ಭಟ್, ಸತ್ಯನಾರಾಯಣ್ ಮತ್ತಿತರೆ ಸಿಬ್ಬಂದಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!