spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಹಾಲಿಗೆ ಬೆಲ್ಲ ಬೆರೆಸಿಕೊಂಡು ಸೇವಿಸಿ… ಏಕೆ ಗೊತ್ತಾ?

- Advertisement -Nitte

ನಿಮಗೆ ಪ್ರತಿ ದಿನ ಒಂದು ಕಪ್‌ ಹಾಲು ಕುಡಿದು ಮಲಗುವ ಅಭ್ಯಾಸವಿದೆಯೇ? ಇದು ತುಂಬಾ ಒಳ್ಳೆಯ ಅಭ್ಯಾಸ. ಸುಖ ನಿದ್ರೆಗೆ ಹಾಲು ಅತ್ಯವಶ್ಯ. ಆದರೆ ಇನ್ಮುಂದೆ ಹಾಗೇ ಹಾಲು ಸೇವಿಸುವ ಬದಲು ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿಕೊಂಡು ಸೇವಿಸಿ. ಇದರಿಂದ ನಿಮ್ಮ ಪ್ರೊಟೀನ್‌, ಕ್ಯಾಲ್ಸಿಯಂ ಮತ್ತು ರೋಗನಿರೋಧಕ ಮಟ್ಟ ಮತ್ತಷ್ಟು ಹೆಚ್ಚುತ್ತದೆ.

ರೋಗ ನಿರೋಧ:
ಬೆಲ್ಲದ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಏಕೆಂದರೆ ಬೆಲ್ಲದಲ್ಲಿ ಅಧಿಕ ಮಟ್ಟದ ಕಬ್ಬಿಣಾಂಶದ ಗುಣವಿದೆ. ಬೆಲ್ಲದ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್‌ ಪ್ರಮಾಣ ಕೂಡ ಹೆಚ್ಚುತ್ತದೆ.

ಪಿರೀಯಡ್ಸ್‌ ಹೊಟ್ಟೆನೋವು:
ಪಿರೀಯಡ್ಸ್‌ ಸಮಯದಲ್ಲಿ ಹೊಟ್ಟೆ ನೋವು ಆಗುತ್ತಿದ್ದರೆ ಉಗುರು ಬಿಸಿ ಹಾಲಿಗೆ ಬೆಲ್ಲವನ್ನು ಹಾಕಿಕೊಂಡು ಸೇವಿಸಿ. ಹೀಗೆ ಕುಡಿಯುವುದರಿಂದ ತಕ್ಷಣ ಹೊಟ್ಟೆನೋವು ಕಡಿಮೆ ಆಗುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಪೀರಿಯಡ್ಸ್‌ ಆಗುತ್ತದೆ.

ಜೀರ್ಣಾಂಗ:
ಹಾಲಿಗೆ ಬೆಲ್ಲವನ್ನು ಸೇರಿಸಿಕೊಂಡು ಕುಡಿಯುವುದರಿಂದ  ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಏಕೆಂದರೆ, ಈ ಪಾಕವಿಧಾನವು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನೀವು ಮಲಬದ್ಧತೆಯಿಂದ ಬಳಲುತ್ತಿದರೆ ಅದಕ್ಕೂ ಕೂಡ ಪರಿಹಾರ ಸಿಗುತ್ತದೆ.

ಮಲಬದ್ಧತೆ:
ಮಲಬದ್ಧತೆ ಸಮಸ್ಯೆ ಇರುವವರು ಬೆಳಗ್ಗೆ ಎದ್ದ ತಕ್ಷಣ ಬಿಸಿ ಹಾಲಿಗೆ ಬೆಲ್ಲ ಬೆರೆಸಿಕೊಂಡು ಸೇವಿಸಿರಿ. ಹೀಗೆ ಒಂದು ವಾರ ಮಾಡಿದರು ಸಾಕು ಮಲಬದ್ಧಯೆ ಸಮಸ್ಯೆ ನಿವಾರಣೆಯಾಗುತ್ತದೆ.

ರಕ್ತಹೀನತೆ:
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ದಿ ಬೆಸ್ಟ್‌ ಸೆಲ್ಯೂಶನ್‌ ಅಂದ್ರೆ ಬೆಲ್ಲ ಬೆರೆಸಿದ ಹಾಲು. ಹಾಲಿನಲ್ಲಿ ಪ್ರೋಟಿನ್‌ ಹಾಗೂ  ಬೆಲ್ಲದಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿರುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ಸಂಧಿ ನೋವು:
ನಿಯಮಿತವಾದ ಬೆಲ್ಲ ಬೆರೆಸಿದ ಹಾಲು ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ. ಮಂಡಿ ನೋವು, ಕೈಕಾಲು ನೋವು ಕಡಿಮೆಯಾಗುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss