Wednesday, August 10, 2022

Latest Posts

ಇನ್ಮುಂದೆ ವಾರದಲ್ಲಿ ಎರಡು ದಿನವಾದ್ರೂ ರಾಗಿ ಮುದ್ದೆ ಸೇವಿಸಿ: ಇದ್ರಿಂದ ಆರೋಗ್ಯಕ್ಕೆ ತುಂಬಾನೇ ಲಾಭವಿದೆ

ಇಂದಿನ ಆಧುನಿಕ ಬದುಕಿಗೆ ರಾಗಿ ಬಹಳ ಉಪಯೋಗಕಾರಿ. ಏಕೆಂದರೆ ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಪ್ರತಿನಿತ್ಯ ಒಂದಿಲ್ಲೊಂದು ರಾಗಿ ಅಡುಗೆ ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಖಂಡಿತ. ಅದರಲ್ಲೂ ಬೇನಿಗೆಯಲ್ಲಿ ರಾಗಿ ಅಮ್ಲಿ ಕುಡಿಯಿರಿ. ಇದು ದೇಹ ತಂಪಗಿರುವಂತೆ ನೋಡಿಕೊಳ್ಳುತ್ತದೆ. ಇಲ್ಲಿದೆ ನೋಡಿ ರಾಗಿಯ ಆರೋಗ್ಯಕರ ಉಪಯೋಗ..

ಹೃದಯ ಆರೋಗ್ಯ:
ರಾಗಿಯಲ್ಲಿ ಅಧಿಕ ಮಟ್ಟದ ಮೆಗ್ನೀಷಿಯಂ ಅಂಶ ಇದ್ದು, ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಕೂಡ  ಇದು ತಗ್ಗಿಸುತ್ತದೆ.

ತಂಪು:
ಬೇಸಿಗೆಯಲ್ಲಿ ದೇಹದ ಉಷ್ಣತೆ ಪ್ರಮಾಣ ಹೆಚ್ಚುತ್ತದೆ. ರಾಗಿ ಹಾಲು ಅಥವಾ ರಾಗಿ ಅಮ್ಲಿ ಮಾಡಿಕೊಂಡು ಕುಡಿದರೆ ದೇಹ ತಂಪಗಿರುತ್ತದೆ.

ತೂಕ ಇಳಿಕೆ:
ರಾಗಿಯಲ್ಲಿ ಅಮಿನೋ ಆಮ್ಲವಾಗಿರುವಂತಹ ಟ್ರಿಪ್ಟೊಫಾನ್ ಇದ್ದು, ಹಸಿವನ್ನು ಕಡಿಮೆ ಮಾಡುವುದು. ಇದರಲ್ಲಿ  ಅಧಿಕ ಮಟ್ಟದ ನಾರಿನಾಂಶ ಕೂಡ ಇರುವುದರಿಂದ ಇದು  ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ತೂಕ ಇಳಿಕೆಗೆ ಸಹಾಯಕವಾಗಿದೆ.

ಮೂಳೆಗಳ ಆರೋಗ್ಯ:
ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಇದು ಮೂಳೆಗಳನ್ನು ಬಲಿಷ್ಠಗೊಳಿಸುವುದು. ನಿಯಮಿತವಾಗಿ ರಾಗಿ ಮುದ್ದೆ ತಿಂದರೆ ಅದರಿಂದ ಅಸ್ಥಿರಂಧ್ರತೆ ತಡೆಯಬಹುದು. ವಿಟಮಿನ್ ಗಳು ಮತ್ತು ಅಮಿನೊ ಆಮ್ಲವು ಚಯಾಪಚಯ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುವುದು.

ಮಧುಮೇಹ:
ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್‌ಗಳ ದಕ್ಷತೆಯನ್ನು ಹೆಚ್ಚಿಸುವಂತಹ ಪ್ರಮುಖ ಖನಿಜಗಳಲ್ಲೊಂದು. ರಾಗಿಯನ್ನು ಸೇವಿಸುವ ಜನರಲ್ಲಿ 30% ದಷ್ಟು ಮಧುಮೇಹವು ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ವಿಷ ಆಮ್ಲ:
ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ. ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss