Wednesday, August 17, 2022

Latest Posts

ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸೋದಿಲ್ವಾ? ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ…

ಅಡುಗೆಗೆ ಬಳಸುವ ಎಣ್ಣೆಗಳಲ್ಲಿ ಬಹು ಪ್ರಮುಖ ಅಂಶಗಳನ್ನು ಒಳಗೊಂಡಿರೋದು ತೆಂಗಿನ ಎಣ್ಣೆ. ಇದರಲ್ಲಿ ಅನೇಕ ಔಷಧೀಯ ಗುಣಗಳಿದ್ದು, ವಿವಿಧ ಸಮಸ್ಯೆಗಳಿಗೆ ಇದು ರಾಮಬಾಣವಾಗಲಿದೆ..

ತೂಕ ಇಳಿಕೆ:
ಪ್ರತಿದಿನ ಅಡುಗೆಗೆ ತಂಗಿನ ಎಣ್ಣೆ ಬಳಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ತೂಕ ಇಳಿಸಲು ಸಹಾಯಕಾರಿಯಾಗಲಿದೆ.

ಜೀರ್ಣಕ್ರಿಯೆ:
ತೆಂಗಿನ ಎಣ್ಣೆ ಸೇವಿಸುವುದರಿಂದ ಹೊಟ್ಟೆಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಹೃದಯಕ್ಕೆ ಆರೋಗ್ಯ:
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ರೋಗಗಳು ದೂರವಾಗುತ್ತದೆ. ಜೊತೆಗೆ ರಕ್ತ ಪರಿಚಲನೆ ಕೂಡ ಸುಧಾರಿಸುತ್ತದೆ.

ಬಾಯಿ ಹುಣ್ಣು:
ಬಾಯಿಯಲ್ಲಿನ ಹುಣ್ಣುಗಳಿಗೆ ಕೊಬ್ಬರಿ ಎಣ್ಣೆ ತುಂಬಾ ಅಗತ್ಯವಿದ್ದು, ಊಟ ಸೇವಿಸುವಾಗ ಕೊಬ್ಬರಿ ಎಣ್ಣೆ ಅನ್ನ ಸೇವಿಸುವುದರಿಂದ ಬಾಯಿ ಹುಣ್ಣು ಕ್ರಮೇಣ ಕಡಿಮೆಯಾಗುತ್ತದೆ.

ಬೊಜ್ಜು:
ತೆಂಗಿನ ಎಣ್ಣೆಯಲ್ಲಿರುವ ಫ್ಯಾಟಿ ಆಸಿಡ್ ಗಳು ಬೊಜ್ಜು ಕಡಿಮೆ ಮಾಡುತ್ತದೆ. ಆದರೂ ಇದರಲ್ಲಿ ಅಧಿಕ ಕ್ಯಾಲೊರಿ ಇರುವ ಕಾರಣನಿಯಮಿತವಾಗಿ ಬಳಸಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!