HEALTH| ಸೋಂಪು ತಿನ್ನಿರಿ, ಸೊಂಪಾಗಿ ಬೆಳೆಯಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವ ಹೊಟೇಲ್‌ಗೆ ಹೋದರೂ ಈ ಕಾಳು ಪ್ರತಿಯೊಂದು ಟೇಬಲ್ಲಲ್ಲೂ ಕಾಣಸಿಗುತ್ತದೆ. ತಿಂಡಿ ಆರ್ಡರ್‌ ಮಾಡಿ ಬರೋದು ಕೊಂಚ ತಡವಾಯ್ತೆಂದರೆ ನಮಗರಿವಿಲ್ಲದಂತೆಯೇ ಈ ಕಾಳಿನ ಬಟ್ಟಲತ್ತ ನಮ್ಮ ಕೈಗಳು ಹೊರಳುತ್ತವೆ. ನಾಲ್ಕಾರು ಕಾಳು ಅಂಗೈಯಲ್ಲಿ ಹಾಕಿಕೊಂಡು ನಿಧಾನವಾಗಿ ಬಾಯಿಗೆ ಹಾಕಿ ಜಗಿಯಲಾರಂಭಿಸುತ್ತೇವೆ.

ತಿಂಡಿ, ಊಟ ಸೇವನೆಯ ಬಳಿಕವಂತೂ ಪ್ರತಿಯೊಬ್ಬರೂ ಸೋಂಪು ಕಾಳನ್ನು ಮೆಲ್ಲುತ್ತಾರೆ. ಇದು ಬಾಯಿಯ ವಾಸನೆಯನ್ನು ಕಡಿಮೆಗೊಳಿಸಿ, ಬಾಯಿ ಫ್ರೆಶ್‌ ಆಗಿರುವಂತೆ ಮಾಡುತ್ತದೆ. ಇದೊಂದೇ ಲಾಭವಲ್ಲ. ಸೋಂಪು ಸೇವನೆಯಿಂದ ಅನೇಕ ಲಾಭಗಳಿವೆ.

ನಿಯಮಿತವಾದ ಸೋಂಪು ಸೇವನೆಯಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ಇದು ಸಹಕಾರಿಯಾಗುತ್ತದೆ. ದೇಹದಲ್ಲಿರುವ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಗರ್ಭಿಣಿಯರ ಆರೋಗ್ಯಕ್ಕೂ ಈ ಸೋಂಪು ಸಹಕಾರಿಯಾಗಿದೆ. ಸೋಂಪು ಕಾಳನ್ನು ನೀರಲ್ಲಿ ನೆನೆಸಿಟ್ಟುಕೊಂಡು ಆ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್‌ ನಿಯಂತ್ರಣವಾಗುತ್ತದೆ. ಬಹುಪಯೋಗಿ ಸೋಂಪು ಕಾಳನ್ನು ಹಿತ ಮಿತವಾಗಿ ಬಳಸಿ..ಆರೋಗ್ಯವನ್ನು ಕಾಪಾಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!