ಚಿನ್ನ ಧರಿಸುವುದರಿಂದ ಸೌಂದರ್ಯ ಮಾತ್ರವಲ್ಲ, ಆರೋಗ್ಯಕ್ಕೂ ಲಾಭ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳೆಯರು ಚಿನ್ನ ಧರಿಸುವುದು ಸಂಪ್ರದಾಯ. ಆದರೆ ಈಗ ಫ್ಯಾಷನ್ ಕೂಡ ಆಗಿದೆ. ಚಿನ್ನ ಧರಿಸುವುದರಿಂದ ಸೌಂದರ್ಯ ಹೆಚ್ಚುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ಲಾಭ ಸಿಗುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ಹೌದು ಚಿನ್ನ ಆರೋಗ್ಯಕ್ಕೂ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಕೆಲ ರೋಗ ಗುಣಪಡಿಸಲು ಚಿನ್ನವನ್ನು ಬಳಸಲಾಗುತ್ತಿತ್ತು. ಚಿನ್ನ ಖಿನ್ನತೆ, ಸಂಧಿವಾತದಂತಹ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. 24 ಕ್ಯಾರೆಟ್ ಶುದ್ಧ ಚಿನ್ನವನ್ನು ಗಾಯ ಅಥವಾ ಸೋಂಕಿನ ಮೇಲಿಟ್ಟರೆ ಗಾಯ ಬೇಗ ಗುಣವಾಗುತ್ತದೆ. ಚಿನ್ನ ಬೆಚ್ಚಗಿನ ಅನುಭವ ನೀಡುತ್ತದೆ ಎಂದು ಪ್ರಾಚೀನ ಕಾಲದ ಜನರು ನಂಬಿದ್ದರು.

ಚಿನ್ನವನ್ನು ಸದಾ ಧರಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆಯಂತೆ. ನೈಸರ್ಗಿಕ ಖನಿಜಗಳು ಇದರಲ್ಲಿರುವುದರಿಂದ ಇದು ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ, ದೇಹಕ್ಕೂ ಹಾನಿಕಾರಕವಲ್ಲ.

ಚಿನ್ನದ ಜೊತೆಗೆ ಬೇರೆ ಲೋಹ ಮಿಶ್ರಣವಾದರೆ ಚಿನ್ನದ ಪ್ರಭಾವ ಕಡಿಮೆಯಾಗುತ್ತದೆ. ಹೀಗಾಗಿ ಚಿನ್ನದ ಜತೆ ಯಾವುದೇ ಬೇರೆ ವಸ್ತುಗಳನ್ನು ಇಡಬಾರದು. ಚಿನ್ನ ಧರಿಸುವುದರಿಂದ ರಕ್ತ ಪರಿಚಲನೆ ಸುಲಭವಾಗುತ್ತದೆ. ರೋಗಗಳನ್ನು ತಡೆಯಲು ಇದು ನೆರವಾಗುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ವಾತಾವರಣ ಬದಲಾದಂತೆ ನಮ್ಮ ದೇಹದಲ್ಲಾಗುವ ಬದಲಾವಣೆ ಹಾಗೂ ಕಾಯಿಲೆಗಳನ್ನು ಚಿನ್ನ ನಿಯಂತ್ರಿಸುತ್ತದೆ. ಇದು ಚಿನ್ನದಿಂದ ಸಿಗುವ ಆರೋಗ್ಯ ಲಾಭಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!