HEALTH CARE | ಥೈರಾಯ್ಡ್‌ ಬರಲು ಕಾರಣವೇನು ? ಈ ಸಮಸ್ಯೆಗೆ ಯಾವೆಲ್ಲಾ ಮನೆಮದ್ದುಗಳಿವೆ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :
ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿನ ವ್ಯತ್ಯಾಸಗಳಿಂದಾಗಿ ಈಗೆಲ್ಲಾ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೆಚ್ಚಿನ ಜನರಲ್ಲಿ ಥೈರಾಯ್ಡ್‌ ಸಮಸ್ಯೆಗಳು ಕಂಡುಬರುತ್ತಿವೆ, ಹಾಗಾದ್ರೆ
ಈ ರೋಗ ಏಕೆ ಬರುತ್ತದೆ ಮತ್ತು ಅದನ್ನು ನಿಯಂತ್ರಿಸಲು ಯಾವೆಲ್ಲಾ ಮನೆಮದ್ದುಗಳನ್ನು ಮಾಡಬಹುದು ತಿಳಿಯಿರಿ.

ಥೈರಾಯ್ಡ್ ಎಂದರೇನು? :
ಥೈರಾಯ್ಡ್‌ ನಿಮ್ಮ ಕುತ್ತಿಗೆಯ ಧ್ವನಿಪೆಟ್ಟಿಗೆಯನ್ನು ಸುತ್ತುವರೆದಿರುವಂತಿರುವ ಒಂದು ಗ್ರಂಥಿಯಾಗಿದ್ದು, ನಮ್ಮ ದೇಹದ ಬೆಳವಣಿಗೆ ಮತ್ತು ಇತರ ಚಟುವಟಿಕೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಈ ಹಾರ್ಮೋನುಗಳ ಸ್ರವಿಕೆ ಏಕೆ ಅಗತ್ಯ? ನಮ್ಮ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡುವುದು, ಜೀರ್ಣಕ್ರಿಯೆ, ಶಕ್ತಿಯ ಬಳಕೆ ಇತ್ಯಾದಿಗಳಿಗೆಲ್ಲಾ ಅಗತ್ಯ ಪ್ರಮಾಣದ ಹಾರ್ಮೋನುಗಳನ್ನು ಸ್ರವಿಸುವುದು ಈ ಗ್ರಂಥಿಯ ಕೆಲಸ. ಅಲ್ಲದೇ ನಮ್ಮ ದೇಹದ ಅತಿಮುಖ್ಯ ಅಂಗಗಳಾದ ಹೃದಯ ಮತ್ತು ಯಕೃತ್‪ಗಳ ಕಾರ್ಯವನ್ನು ನಿರ್ವಹಿಸಲೂ ಥೈರಾಯ್ಡ್ ಸ್ರವಿಕೆ ಅವಶ್ಯಕವಾಗಿದ್ದು ಒಂದರ್ಥದಲ್ಲಿ ಈ ಅಂಗಗಳನ್ನು ನಿಯಂತ್ರಿಸುವ ಚಾಲಕನಾಗಿದೆ.

ಥೈರಾಯ್ಡ್‌ ಬರಲು ಕಾರಣವೇನು ? :
ಥೈರಾಯ್ಡ್ ಸಮಸ್ಯೆಯು ಆನುವಂಶಿಕವಾಗಿ, ಜನ್ಮಜಾತ ದೋಷಗಳಿಂದ, ಔಷಧಿಯ ಪರಿಣಾಮ ಮತ್ತು ಆಂಟಿಥೈರಾಯ್ಡ್ ಪ್ರತಿಕಾಯಗಳ ಕಾರಣದಿಂದ ಉದ್ಭವಿಸಬಹುದು. ಕೆಲವು ವೈದ್ಯಕೀಯ ಅಧ್ಯಯನದ ಪ್ರಕಾರ 800 ಮಕ್ಕಳಲ್ಲಿ ಶೇ.79 ರಷ್ಟು ಮಕ್ಕಳು ಥೈರಾಯ್ಡ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಥೈರಾಯ್ಡ್‌ ಅನ್ನು ನಿಯಂತ್ರಿಸಲು ಮನೆಮದ್ದುಗಳು :
ಕ್ಯಾರೆಟ್‌ ಜ್ಯೂಸ್‌ ಕುಡಿಯಿರಿ.
ಅಶ್ವಗಂಧ ಬಳುವುದು.
ಶುದ್ದ ಕೊಬ್ಬರಿ ಎಣ್ಣೆ ಬಳಸಿ.
ಶುಂಠಿ ಸೇವನೆ
ಅಯೋಡಿನ್‌ ಹೊಂದಿರುವ ಆಹಾರಗಳು
ಸೋರೆಕಾಯಿ ರಸವನ್ನು ಕುಡಿಯಿರಿ.
ಹಲಸಿನ ಹಣ್ಣನ್ನು ತಿನ್ನಿ.
ದಿನನಿತ್ಯ ಬಾದಾಮಿಯನ್ನು ತಿನ್ನಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!