ಆರೋಗ್ಯವಂತ ಜೀವನಕ್ಕೆ ಬೇಕೇ(ಳೇ) ಕಾಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಯುವ ಜನಾಂಗವಂತೂ ಸ್ಮಾರ್ಟ್ ಅಂಡ್ ಫಿಟ್,ಹೆಲ್ತೀ ಆಗಿ ಇರೋದನ್ನೇ ಬಯಸ್ತಾರೆ. ಹಾಗಾದರೆ ಆ ರೀತಿ ಫಿಟ್ ಅಂಡ್ ಸ್ಮಾರ್ಟ್ ಆಗಿರೋದಕ್ಕೆ ಏನೇನ್ ಮಾಡ್ಬೇಕು? ಅನ್ನೋ ಚಿಂತೆ ಅನೇಕರಿಗಿದೆ. ಇಲ್ಲಿ ಒಂದಷ್ಟು ಟಿಪ್ಸ್ ಇದೆ. ಇದನ್ನು ಫಾಲೋ ಮಾಡಿದ್ರೆ ನೀವೂ ಈ ಸಾಲಿಗೆ ಸೇರೋದಂತೂ ಗ್ಯಾರಂಟಿ!.
ನೀವು ಫಿಟ್ ಆಗಿರಲು ಬಯಸೋ ಹಾಗಿದ್ದರೆ ದೈಹಿಕ ವ್ಯಾಯಾಮದ ಜೊತೆಗೆ, ಆಹಾರ ಕ್ರಮದತ್ತ ಗಮನ ಹರಿಸುವುದು ಅತೀ ಮುಖ್ಯ. ದಿನಂಪ್ರತಿ ನಿಯಮಿತ ರೀತಿಯಲ್ಲಿ ಆಹಾರ ಸೇವಿಸುವುದಷ್ಟೇ ಅಲ್ಲ, ಸಾಕಷ್ಟು ನೀರು ಕುಡಿಯುವುದು ಕೂಡಾ ಅತ್ಯವಶ್ಯ. ಕರಿದ ಪದಾರ್ಥ, ಮಾಂಸಾಹಾರಗಳನ್ನು ಕಡಿಮೆ ಮಾಡಿ, ನಾರಿನ ಅಂಶ ಹೊಂದಿದ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು.
ಸದೃಢ ಆರೋಗ್ಯಕ್ಕೆ ಬೇಳೆ ಕಾಳುಗಳು  ಒಳ್ಳೆಯದು.  ಹೆಸರು ಕಾಳು, ಮಸೂರ್ ದಾಲ್, ಕಡಲೆ ಕಾಳು, ಉದ್ದಿನ ಬೇಳೆಗಳು ಆರೋಗ್ಯವರ್ಧನೆಗೆ ಸಹಕಾರಿ. ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ ಆಹಾರ. ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಕೂಡ ಇದ್ದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಜೊತೆಗೆ ರಕ್ತದೊತ್ತಡವನ್ನು  ನಿಯಂತ್ರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!