HEALTH | ದಿನದ ಆಯಾಸ ಕಡಿಮೆ ಮಾಡೋಕೆ ಉಪ್ಪು ನೀರಲ್ಲಿ ಕಾಲು ಮುಳುಗಿಸಿ ಇಡಿ, ರಿಲ್ಯಾಕ್ಸ್ ಆಗುತ್ತೆ

ದಿನಪೂರ್ತಿ ಕೆಲಸ, ಓಡಾಟ, ಒತ್ತಡದಿಂದ ಸಂಜೆ ವೇಳೆಗೆ ದೇಹ ತುಂಬಾ ಆಯಾಸಗೊಂಡಂತೆ ಅನಿಸುತ್ತದೆ. ವಿಶೇಷವಾಗಿ ಕಾಲುಗಳಲ್ಲಿ ನೋವು, ಭಾರವಾದ ಅನುಭವ ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸರಳವಾದ ಮನೆಮದ್ದು ಒಂದಿದೆ ಉಪ್ಪು ನೀರಲ್ಲಿ ಕಾಲುಗಳನ್ನು ಸ್ವಲ್ಪ ಸಮಯ ಮುಳುಗಿಸಿ ಇಡುವುದು. ಇದು ದೇಹಕ್ಕೆ ಆರಾಮ ನೀಡುವ ಸರಳ ಹಾಗೂ ಪರಿಣಾಮಕಾರಿ ವಿಧಾನ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನಕ್ಕೆ ಕೆಲವೇ ನಿಮಿಷ ಈ ವಿಧಾನ ಅನುಸರಿಸಿದರೆ ದೇಹದ ಆಯಾಸ ಕಡಿಮೆಯಾಗಲು ಮತ್ತು ಮನಸ್ಸು ಶಾಂತವಾಗಲು ಸಹಕಾರಿ.