ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೇಸಿಗೆಯಲ್ಲಿ ದೇಹ ತಂಪುಗೊಳಿಸಲು ಈ ಪಾನೀಯಗಳನ್ನು ತಪ್ಪದೆ ಸೇವಿಸಿ…ಇಲ್ಲಿದೆ ಲಿಸ್ಟ್

ನೋಡ ನೋಡುತ್ತಿದಂತೆ ಏಪ್ರಿಲ್ ತಿಂಗಳು ಬಂದೇ ಬಿಟ್ಟಿದೆ. ಹವಾಮಾನದಲ್ಲಿ ಎಷ್ಟೋ ಏರುಪೇರನ್ನು ನೋಡಿರುವ ನಮಗೆ ಈ ಬೇಸಿಗೆ ಶಾಖ ತಡೆಯೋಕೆ ಬಲು ಕಷ್ಟ. ಈ ಬಿಸಿಲಿನಲ್ಲಿ ಆರೋಗ್ಯ, ಸೌಂದರ್ಯ ಎಲ್ಲವನ್ನೂ ಕಾಪಾಡಿಕೊಳ್ಳಬೇಕು. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸಲು ಈ ಪಾನೀಯಗಳನ್ನು ತಪ್ಪದೆ ಸೇವಿಸಿ ನೋಡಿ..ಪ್ರಯೋಜನ ಪಡೆದುಕೊಳ್ಳಿ

ಮಜ್ಜಿಗೆ: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಪಾನೀಯಗಳಲ್ಲಿ ಮಜ್ಜಿಗೆ ಕೂಡ ಒಂದು. ಇದನ್ನು ನೀವು ನೇರವಾಗಿ ಸೇವಿಸಬಹುದು ಅಥವಾ ಇಂಗು, ಸಾಸಿವೆ, ಉಪ್ಪು ಹಾಗೂ ಕೊತ್ತಂಬರಿ ಹಾಕಿಯೂ ಸೇವಿಸಬಹುದು.

ಎಳನೀರು: ಬಿಸಿಲಿಗೆ ದೇಹದಲ್ಲಿನ ಎಲೆಕ್ಟ್ರೋಲೈಟ್ ಅಂಶವು ಕಡಿಮೆಯಾಗಿರುತ್ತದೆ. ಎಳನೀರು ಸೇವಿಸುವುದರಿಂದ ವಿಟಮ್ಸ್, ಮಿನರಲ್ಸ್ ಹಾಗೂ ಎಲೆಕ್ಟ್ರೋಲೈಟ್ ದೊರಕಲಿದೆ. ಇದು ನಿಮ್ಮನ್ನು ಫ್ರೆಶ್ ಆಗಿ ಇರಿಸುತ್ತದೆ.

ನಿಂಬು ಪಾನಕ: ನಿಂಬುವಿನಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಬಿಸಿಲಿಗೆ ಸುಡುವ ದೇಹದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಕೋಲ್ಡ್ ಕಾಫಿ: ಬೇಸಿಗೆಯಲ್ಲಿ ತಂಪು ಪಾನಿಯಗಳನ್ನು ಸೇವಿಸಬಾರದು ಅನ್ನುತ್ತಾರೆ ಆದರೆ ಮನೆಯಲ್ಲೇ ತಯಾರಿಸಿ ಕೋಲ್ಡ್ ಕಾಫಿ ಸೇವಿಸೋದು ಉತ್ತಮ.

ಬಾದಾಮಿ ಹಾಲು: ಇದರಲ್ಲಿ ಹೆಚ್ಚು ನ್ಯೂಟ್ರಿಯಂಟ್ಸ್ ಅಂಶವನ್ನು ನೀಡುತ್ತದೆ. ಇದಕ್ಕೆ ಸ್ವಲ್ಪ ಏಲಕ್ಕಿ, ಬಾದಾಮಿ, ಸಕ್ಕರೆ ಹಾಕಿ ಸೇವಿಸುವುದು ಒಳ್ಳೆಯದು.

ಪುದೀನಾ ಗ್ರೀನ್ ಟೀ: ಮಾಮೂಲಿ ಗ್ರೀನ್ ಟೀ ಸೇವಿಸಿ ಅಭ್ಯಾಸವಿದ್ದರೆ ಈ ಬಾರಿ ನೀವು ವಿಭಿನ್ನವಾದುದ್ದನ್ನು ಪ್ರಯತ್ನನಿಸಿ. ಇದು ಬೇಸಿಗೆಯಲ್ಲಿ ನಿಮ್ಮ ಮನಸ್ಸು ಹಾಗೂ ದೇಹವನ್ನು ಫ್ರೆಶ್ ಆಗಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss