Healthy Plate | ನಿಮ್ಮ ತಟ್ಟೆಯಲ್ಲಿರಬೇಕಾದ ಫಿಟ್ನೆಸ್ ಫುಡ್ ಯಾವುದು?
ಫಿಟ್ ಆಗಿರಬೇಕು ಅಂದ್ರೆ ಕೇವಲ ಕಡಿಮೆ ತಿನ್ನೋದು ಸಾಕಾಗೋದಿಲ್ಲ, ಸರಿಯಾಗಿ ತಿನ್ನೋದು ಮುಖ್ಯ. ಹಲವರು ಡಯಟ್ ಅಂದ್ರೆ ಊಟ ಕಡಿಮೆ ಮಾಡ್ಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗದೇ ಹೋದರೆ ಎನರ್ಜಿ ಕಡಿಮೆ ಆಗುತ್ತದೆ, ಮೆಟಾಬಾಲಿಸಂ ನಿಧಾನವಾಗುತ್ತದೆ. ಆದ್ದರಿಂದ ನಿಮ್ಮ ತಟ್ಟೆ ಬಣ್ಣಬಣ್ಣವಾಗಿಯೂ, ಬ್ಯಾಲೆನ್ಸ್ ಆಗಿಯೂ ಇರಬೇಕು. ತಟ್ಟೆಯಲ್ಲಿ ಬ್ಯಾಲೆನ್ಸ್ ಇದ್ದರೆ ದೇಹದಲ್ಲೂ ಬ್ಯಾಲೆನ್ಸ್ ಇರುತ್ತದೆ. ಫಿಟ್ನೆಸ್ ಶುರುವಾಗೋದು ಜಿಮ್‌ನಲ್ಲಿ ಅಲ್ಲ… ನಿಮ್ಮ ತಟ್ಟೆಯಿಂದಲೇ.
Copy and paste this URL into your WordPress site to embed
Copy and paste this code into your site to embed