spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಂಗಳದ ಅಂದ ಹೆಚ್ಚಿಸುವ ದಾಸವಾಳದ ಆರೋಗ್ಯಕರ ಗುಣಗಳ ಬಗ್ಗೆ ಎಷ್ಟು ಗೊತ್ತು? ಇಲ್ಲಿದೆ ನೋಡಿ..

- Advertisement -Nitte

ದಾಸವಾಳ ಪ್ರತಿಯೊಬ್ಬರ ಮನೆಯಲ್ಲಿಯೂ ಬಿಡುವಂತಹ ಸಾಮಾನ್ಯ ಹೂವು. ಇದಕ್ಕೇನು ಹೆಚ್ಚಿಗೆ ಜಾಗ ಬೇಡ. ಅಂಗೈ ಅಗಲ ಜಾಗದಲ್ಲಿಯೇ ದಾಸವಾಳ ಗಿಡ ಮಾಡಬಹುದು. ತುಂಬಾ ಜನರ ಮನೆಯಲ್ಲಿ ಈ ಹೂವಿನ ಗಿಡ ಇದೆ. ಆದರೆ ಇದರ ಉಪಯೋಗದ ಬಗ್ಗೆ ತಿಳಿದಿಲ್ಲ. ಇದರ ಉಪಯೋಗದ ಬಗ್ಗೆ ಕೇಳಿದರೆ ನೀವೇ ಬೆಚ್ಚಿ ಬೀಳುತ್ತೀರಾ.

ದೇಹದ ಉಷ್ಣತೆ:
ದೇಹದ ಉಷ್ಣತೆ ಹೆಚ್ಚಾದರೆ ದಾಸವಾಳದ ಹೂವು ಅಥವಾ ಅದರ ಎಲೆಯನ್ನು ನೀರಿನಲ್ಲಿ ಹಾಕಿ ಕೈಯಿಂದ ಸರಿಯಾಗಿ ಕಿವುಚಿಕೊಳ್ಳಬೇಕು. ಅದರಲ್ಲಿ ಇರುವ ಲೋಳೆ ಅಂಶ ನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆ ನೀರನ್ನು ದಿನಕ್ಕೆ ಮೂರು ಸಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ.

ಹೊಟ್ಟು:
ತಲೆಯಲ್ಲಿ ಹೊಟ್ಟು ಆದರೆ ದಾಸವಾಳದ ಎಲೆ ಮತ್ತು ಅದರ ಹೂವನ್ನು ವಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ಹುಳಿ ಮಜ್ಜಿಗೆಯನ್ನು ಸೇರಿಸಿಕೊಂಡು ತಲೆಗೆ ಹಚ್ಚಿ ಒಂದು ತಾಸಿನ ನಂತರ ತಲೆ ತೊಳೆದುಕೊಂಡರೆ ಹೊಟ್ಟು ನಿವಾರಣೆಯಾಗುತ್ತದೆ.

ಕೂದಲು ಕಪ್ಪು:
ಕೂದಲು ಕಪ್ಪಾಗಬೇಕೆಂದರೆ ದಾಸವಾಳದ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಅದನ್ನು ಶೋಧಿಸಿ ಇಟ್ಟುಕೊಳ್ಳಬೇಕು. ಅದನ್ನು ದಿನವೂ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಮತ್ತು ಸೊಂಪಾಗಿ ಬೆಳೆಯುತ್ತದೆ.

ಮಲಬದ್ಧತೆ:
ಬಿಳಿ ದಾಸವಾಳದ ಹೂವನ್ನು ಲಿಂಬುವಿನ ಜೊತೆ ಸೇರಿಸಿ ಅದನ್ನು ಜಜ್ಜಿ ರಸ ತೆಗೆದು ಅದನ್ನು ಮಕ್ಕಳಿಗೆ ಕುಡಿಸಿದರೆ ಮಲ ವಿಸರ್ಜನೆ ತೊಂದರೆ ಇದ್ದರೆ ಸರಿಯಾಗುತ್ತದೆ.

ಪೀರಿಯಡ್ಸ್ ಹೊಟ್ಟೆನೋವು:
ಮುಟ್ಟಿನ ಸಮಯದಲ್ಲಿ ಆಗುವಂತಹ ಅತಿಯಾದ ರಕ್ತ ಸ್ರಾವವನ್ನು ತಡೆಯಲು ದಾಸವಾಳದ ಮೊಗ್ಗನ್ನು ಹಸಿ ಹಾಲಿನಲ್ಲಿ ಅರೆದು ಸೇವಿಸಿದರೆ ರಕ್ತ ಸ್ರಾವ ಕಡಿಮೆ ಆಗುತ್ತದೆ.

ಬಾಯಿಹುಣ್ಣು:
ಬಾಯಿಯಲ್ಲಿ ಆಗುವ ಹುಣ್ಣನ್ನು ತಡೆಯಲು ದಾಸವಾಳ ರಾಮಬಾಣ. ದಾಸವಾಳ ಹೂವನ್ನು ಜಗಿದು ಸೇವಿಸುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss