ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಇದ್ದೇ ಇರುವಂತಹ ತರಕಾರಿ ಎಂದರೆ ಅದು ಈರುಳ್ಳಿ. ಈರುಳ್ಳಿ ಇಲ್ಲದಿದ್ದರೆ ಅಡುಗೆ ರುಚಿ ಹೆಚ್ಚುವುದಿಲ್ಲ. ಈರುಳ್ಳಿ ಕೇವಲ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪ್ರತಿ ದಿನ ಒಂದು ಪೀಸ್ ಈರುಳ್ಳಿಯನ್ನು ಕಟ್ ಮಾಡಿಕೊಂಡು ತಿನ್ನಿ. ಆರೋಗ್ಯದಲ್ಲಿ ಬದಲಾವಣೆಯನ್ನು ನೀವೇ ಗಮನಿಸಿ.
- ಕ್ಯಾನ್ಸರ್: ಪ್ರತಿ ದಿನ ಮೊಸರಿನೊಂದಿಗೆ ಈರುಳ್ಳಿ ಸೇವಿಸಿದರೆ ಕ್ಯಾನ್ಸರ್ ತಡೆಯಬಹುದು.
- ಕೆಮ್ಮು: ನೆಗಡಿ, ಕೆಮ್ಮು ಕಫ ಆದಾಗ 2 ಚಮಚ ಈರುಳ್ಳಿಯ ರಸಕ್ಕೆ 2 ಚಮಚ ಜೇನು ತುಪ್ಪ 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ಕುಡಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
- ಜ್ವರ: ಜ್ವರ ಬಂದಾಗ ಈರುಳ್ಳಿ ಪೀಸ್ ಅಥವಾ ಈರುಳ್ಳಿ ರಸವನ್ನು ಹಣೆಗೆ ಹಚ್ಚಿದರೆ ಜ್ವರ ಕಡಿಮೆ ಆಗುತ್ತದೆ.
- ಕೊಲೆಸ್ಟ್ರಾಲ್ : ಪ್ರತಿ ದಿನ ಹಸಿ ಈರುಳ್ಳಿ ಸೇವಿಸಿದರೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚುತ್ತದೆ.
- ಜ್ಞಾಪಕ ಶಕ್ತಿ: ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಸಿ ಈರುಳ್ಳಿ ಸೇವಿಸಲು ಕೊಡಿ. ಈರುಳ್ಳಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
- ಕೂದಲು ಸಮಸ್ಯೆ: ಮಹಿಳೆಯರು ತಲೆ ಸ್ನಾನಕ್ಕೂ 2 ಗಂಟೆ ಮೊದಲು ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿಕೊಳ್ಳಿ. ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.
- ಮೂಲವ್ಯಾಧಿ: ಈರುಳ್ಳಿಯನ್ನು ಮೊಸರಿನೊಂದಿಗೆ ಜಜ್ಜಿ ಹಸಿ ಹಾಲಿನಲ್ಲಿ ಹಾಕಿಕೊಂಡು ಸೇವಿಸಿ ಮೂಲವ್ಯಾಧಿ ನಿವಾರಣೆಯಾಗುತ್ತದೆ.