ರಸ್ತೆ ಬದಿಯಲ್ಲಿ ರಾಶಿ ರಾಶಿ ಮಾಂಸ: ಊರವರಲ್ಲಿ ಮನೆಮಾಡಿದ ಆತಂಕ

ಹೊಸದಿಗಂತ ವರದಿ, ಬಂಟ್ವಾಳ:

ರಸ್ತೆ ಬದಿ ಮಾಂಸದ ರಾಶಿ ಕಂಡು ಊರವರು ಆತಂಕಕ್ಕೆ ಒಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬೋಳoಗಡಿ ಬಳಿ ನಡೆದಿದೆ.

ಕಲ್ಲಡ್ಕ ಸಮೀಪದ ಬೋಳಂಗಡಿ ಎರಡನೇ ಕ್ರಾಸ್ ಬಳಿ ಮಾಂಸದ ತ್ಯಾಜ್ಯ ಪತ್ತೆಯಾಗಿದ್ದು, ಆತಂಕಕ್ಕೊಳಗಾದ ಊರಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದು, ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಕುರಿ, ಕೋಳಿ, ಆಡು ಪ್ರಾಣಿಗಳ ತ್ಯಾಜ್ಯ ಎಂದು ವೈದ್ಯರು ದೃಢಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮಾಂಸವನ್ನು ಪರೀಕ್ಷೆಗೆ ಲ್ಯಾಬಿಗೆ ಕಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!