ಸಚಿವರ ಆಪ್ತೆಯ ಮನೆಯಲ್ಲಿ ರಾಶಿ ರಾಶಿ ಲೈಂಗಿಕ ಆಟಿಕೆಗಳು: ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಹಾಗೂ ನಟಿ ಅರ್ಪಿತಾ ಮುಖರ್ಜಿ ಅವರ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳಿಗೆ ಹಲವು ಅಚ್ಚರಿಯ ವಿಷಯಗಳ ಮಾಹಿತಿ ಸಿಗುತ್ತಿದೆ.

ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಚಟರ್ಜಿ ಮನೆಯಲ್ಲಿ 28 ಕೋಟಿ ರೂಪಾಯಿ ಪತ್ತೆಯಾಗಿತ್ತು. ಇದೀಗ ಮತ್ತೊಂದು ಮನೆಯಲ್ಲಿದ್ದ ಕಂತೆ ಕಂತೆ ಹಣ ಕಾರಿನಲ್ಲಿ ತುಂಬಿಕೊಂಡು ಸಾಗಿಸಿದ ಘಟನ ನಡೆದಿದೆ ಅಂತೆ.

ಈ ಕುರಿತು ಇಡಿ ಅಧಿಕಾರಿಗಳು ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಅರ್ಪಿತಾ ಅವರ ಒಂದು ಮನೆಯಿಂದ 4 ಕಾರುಗಳು ಕಾಣೆಯಾಗಿದೆ. ಈ ಕಾರಿನಲ್ಲಿ ಮನೆಯಲ್ಲಿಟ್ಟಿದ್ದ ಕಂತೆ ಕಂತೆ ಹಣವನ್ನು ತುಂಬಿಕೊಂಡು ರಹಸ್ಯ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಡಿ 4, ಹೋಂಡಾ ಸಿಟಿ, ಹೋಂಡಾ CRV ಹಾಗೂ ಮರ್ಸಿಡೀಸ್ ಬೆಂಜ್ ಕಾರುಗಳ ಮೂಲಕ ಹಣ ಸಾಗಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ನಾಲ್ಕು ಕಾರುಗಳು ಅರ್ಪಿತಾ ಮನೆಯಿಂದ ಕಾಣೆಯಾಗಿದೆ. ಅರ್ಪಿತ ಬಂಧನದ ಮರುದಿನವೇ ಈ ಘಟನೆ ನಡೆದಿದೆ. ಈ ಕಾರುಗಳು ಎಲ್ಲವೆ, ಯಾವ ದಿಕ್ಕಿನಲ್ಲಿ ಚಲಿಸಿದೆ ಅನ್ನೋ ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

ಸೆಕ್ಸ್​ ಟಾಯ್ಸ್ ಪತ್ತೆ
ಇತ್ತ ಅರ್ಪಿತಾ ಮುಖರ್ಜಿ ಮನೆಯ ಮೇಲೆ ದಾಳಿ ನಡೆಸಿದಾಗ ಅಪಾರ ಚಿನ್ನಾಭರಣಗಳ ಜತೆಗೆ, ರಾಶಿ ರಾಶಿ ಸೆಕ್ಸ್​ ಟಾಯ್ಸ್​ (ಲೈಂಗಿಕ ಕ್ರಿಯೆಗೆ ಬಳಸುವ ಆಟಿಕೆಗಳು) ಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸೆಕ್ಸ್ ಟಾಯ್ಸ್​ಗೆ ಸಂಬಂಧಿಸಿದಂತೆ ಅರ್ಪಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ಇಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನು ಅರ್ಪಿತಾ ಅವರ ಮನೆಗೆ ತಂದವರು ಯಾರು, ಏಕೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈ ಆಟಿಕೆಗಳ ಸಮೀಪವೇ ಬೆಳ್ಳಿಯ ಬಟ್ಟಲುಗಳು ಸಿಕ್ಕಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಬಂಗಾಳಿ ಜನರು ಹೊಸದಾಗಿ ಮದುವೆಯಾದ ದಂಪತಿಗೆ ಬೆಳ್ಳಿಯ ಬಟ್ಟಲುಗಳನ್ನು ನೀಡುತ್ತಾರೆ. ಹೊಚ್ಚ ಹೊಸತಾಗಿರುವ ಬೆಳ್ಳಿಯ ಬಟ್ಟಲುಗಳು ಅರ್ಪಿತಾ ಮನೆಯಲ್ಲಿ ಏನು ಮಾಡುತ್ತಿವೆ ಎಂಬ ಸಂಶಯ ಮೂಡಿದೆ.

ಇದೀಗ ಇಡಿ ಅಧಿಕಾರಿಗಳು ಈ ಎಲ್ಲಾದರ ಹಿಂದೆ ಬಿದಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!