Thursday, October 6, 2022

Latest Posts

ಹೃದಯ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ. ನೆರವು ನೀಡಿದ ಕ್ಯಾಂಪ್ಕೋ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊದ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ನೀರ್ಚಾಲು ಶಾಖೆಯ ಸಕ್ರಿಯ ಸದಸ್ಯ ಕಾಸರಗೋಡು ತಾಲೂಕು ಮಧೂರು ಗ್ರಾಮದ ಎ. ವಿಶ್ವನಾಥ ಭಟ್ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚದ ಸಹಾಯಧನ ಎರಡು ಲಕ್ಷ ರೂಪಾಯಿಯ ಮೊತ್ತದ ಚೆಕ್‌ನ್ನು ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಹಸ್ತಾಂತರಿಸಿದರು.

ಈ ಸಂದರ್ಭ ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ, ಕೆ.ಬಾಲಕೃಷ್ಣ ರೈ ಬಾನೊಟ್ಟು, ಜಯರಾಮ ಸರಳಾಯ, ಜಯಪ್ರಕಾಶ ನಾರಾಯಣ ಟಿ.ಕೆ., ರಾಧಾಕೃಷ್ಣನ್ ಕೆ., ಸುರೇಶ್ ಕುಮಾರ್ ಶೆಟ್ಟಿ ಪಿ., ಕ್ಯಾಂಪ್ಕೊ ಮಾರುಕಟ್ಟೆ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ಗೋವಿಂದ ಭಟ್ ಎಸ್., ಬದಿಯಡ್ಕ ಪ್ರಾಂತೀಯ ಹಿರಿಯ ವ್ಯವಸ್ಥಾಪಕರಾದ ಗಿರೀಶ್ ಇ., ನೀರ್ಚಾಲು ಶಾಖಾ ವ್ಯವಸ್ಥಾಪಕರಾದ ಜಯನ್ ಸಿ., ಬದಿಯಡ್ಕ ಶಾಖಾ ವ್ಯವಸ್ಥಾಪಕರಾದ ದಿನೇಶ್ ಕುಮಾರ್ ಕೆ. ಹಾಗೂ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!