ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಬಸ್ ಗ್ಯಾರೇಜ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ೨೦ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಬೂದಿಯಾಗಿವೆ.
ಹೊಸಕೆರೆಹಳ್ಳಿಯ ವೀರಭದ್ರನಗರದ ಸಮೀಪದಲ್ಲಿರುವ ಎಸ್‌ವಿ ಕೋಚ್ ಬಸ್ ಬಾಡಿಬಿಲ್ಡರ‍್ಸ್ ಮತ್ತು ಗ್ಯಾರೇಜ್‌ನಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ. ನಿಂತಿದ್ದ ಬಸ್ ಒಂದರ ಭಾಗಕ್ಕೆ ವೆಲ್ಡಿಂಗ್ ಕೆಲಸ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ.
ವೆಲ್ಡಿಂಗ್ ಯಂತ್ರದಿಂದ ಹಾರಿದ ಕಿಡಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೆರೆದ ಜಾಗದಲ್ಲಿ ಗ್ಯಾರೇಕ್ ಇರುವ ಕಾರಣ, ಬೆಂಕಿ ಕಾಣಿಸಿಕೊಂಡ ತಕ್ಷಣ ಜನರೆಲ್ಲರೂ ಹೊರಬಂದಿದ್ದಾರೆ, ಒಟ್ಟಾರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.