ಹೊಸದಿಗಂತ ಆನ್ ಲೈನ್ ಡೆಸ್ಕ್:
ಉತ್ತರ ಪ್ರದೇಶದ ನೋಯ್ಡಾ ಪ್ರದೇಶದಲ್ಲಿರುವ ಬಹಲೋಲ್ಪುರ್ ಗ್ರಾಮದ ಸ್ಲಂನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮೂರು ವರ್ಷದ ಬಾಲಕ ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ನೋಯ್ಡಾದ ಪೊಲೀಸ್ ಸ್ಟೇಷನ್ 3ರ ಪ್ರದೇಶದಲ್ಲಿರುವ ಬಹಲೋಲ್ಪುರ್ ಗ್ರಾಮದ ಸ್ಲಂ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಧವಿಸಿರುವ ಪೊಲೀಸರು. ಅಗ್ನಿ ಶಾಮಕದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತೆಗೆದುಕೊಳ್ಳುವ ಕಾರ್ಯವನ್ನು ಮಾಡಿದ್ದಾರೆ.
ನೋಯ್ಡಾದ ಹಲವು ಮಂದಿ ಭಾರೀ ಹೊಗೆ ಆಕಾಶದೆತ್ತರಕ್ಕೆ ಏರುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.