ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಭಟ್ಕಳ:
ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಟ್ಕಳದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ ಚೌಥನಿ ನದಿ ತುಂಬಿ ಹರಿದ ಪರಿಣಾಮ ಸಮೀಪದ ಗ್ರಾಮ ಜಲಾವೃತಗೊಂಡಿದ್ದು ಮನೆಗಳಿಗೆ ನೀರು ನುಗ್ಗಿದೆ.
ಮಳೆಯ ಆರ್ಭಟ ರವಿವಾರ ಮದ್ಯಾಹ್ನದ ವರೆಗೆ ಮುಂದುವರಿದ ಕಾರಣ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಪೂರ್ಣ ನೀರು ತುಂಬಿ ಹರಿಯತೊಡಗಿದ್ದು ವಾಹನ ಸಂಚಾರಕ್ಕೆ ತೊಂದರೆ ಪಡಬೇಕಾದ ಸ್ಥಿತಿ ಬಂದೊದಗಿದೆ.
ಬಸ್ ನಿಲ್ದಾಣದ ಸಮೀಪದ ಶಂಶುದ್ದೀನ್ ಸರ್ಕಲ್ ಬಳಿ ಮಳೆ ನೀರು ತುಂಬಿಕೊಂಡಿದ್ದು ಸಮೀಪದ ಅಂಗಡಿಕಾರರಿಗೆ ಸಮಸ್ಯೆ ಉಂಟಾಗಿದೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಅಬ್ಬರದಿಂದ ಚಿಕ್ಕ ಪುಟ್ಟ ಹೊಳೆಗಳು ತುಂಬಿಕೊಂಡು ಕೃಷಿ ಭೂಮಿಯಲ್ಲಿ ನೀರು ತುಂಬಿ ಕೊಂಡಿದೆ.
ಚತುಷ್ಪತ ಕಾಮಗಾರಿಯ ಅವಾಂತರದಿಂದ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದ್ದು ಸಾರ್ವಜನಿಕರು ಮಳೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.