ಹುಬ್ಬಳ್ಳಿಯಲ್ಲಿ ಮಳೆ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದಲ್ಲಿ ಸೋಮವಾರ ರಾತ್ರಿಯಿಡೀ ಹಾಗೂ ಮಂಗಳವಾರ ಮಧ್ಯಾಹ್ನ‌ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಗುಡುಗು,ಮಿಂಚು, ಸಿಡಿಲು ಸಮೇತ ಅಬ್ಬರದ ಮಳೆಯಾಗಿದ್ದರಿಂದ ತಗ್ಗು ಪ್ರದೇಶದಲ್ಲಿದ್ದ ಮನೆ-ಅಂಗಡಿಗಳಿಗೆ ನೀರು ನುಗ್ಗಿದೆ.
ವಾಣಿಜ್ಯ ಸಂಕೀರ್ಣಗಳು ಅಪಾರ್ಟ್‌ಮೆಂಟ್ ಗಳ ತಳಮಹಡಿಗಳು ಜಲಾವೃತಗೊಂಡಿದ್ದು, ಸಾರ್ವಜನಿಕ ಅಗ್ನಿ ಶಾಮಕ ಸಿಬ್ಬಂದಿ ಕರೆತಂದು ನೀರು ಹೊರತೆಗೆಯುವ ದೃಶ್ಯಗಳು ಕಂಡು ಬಂದವು. ಗ್ರಾಮೀಣ ಭಾಗದಲ್ಲಿ ಕೆಲ ಮನೆಗಳು ಕುಸಿದಿವೆ. ಮಳೆ ಹಲವಾರು ಜಾನುವಾರುಗಳ ಪ್ರಾಣ ಕಸಿದುಕೊಂಡಿದೆ.
ಕಟ್ಟಿಕೊಂಡ ಒಳ ಚರಂಡಿ ಮತ್ತು ಅಲ್ಲಲ್ಲಿ ತೆರೆದುಕೊಂಡ ಮ್ಯಾನ್ ಹೋಲ್ ಗಳಿಂದಾಗಿ ಹಲವೆಡೆ ರಸ್ತೆಗಳು ಹಳ್ಳದಂತಾಗಿವೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ. ಒಳಚಂರಡ್ಡಿ ನೀರು ಸರಾಗವಾಗಿ ಸಾಗದಿರುವುದರಿಂದ ಈ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಸ್ಮಾಟ್೯ ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳನ್ನು ಶಪಿಸಿದರು.
ಮನೆ-ಅಂಗಡಿಗಳಲ್ಲಿ ಸೇರಿದ್ದ ನೀರನ್ನು ಜನರು ಬೆಳಿಗ್ಗೆ ಪೈಪ್ ಮೂಲಕ ಹೊರಹಾಕುತ್ತಿದ್ದ ದೃಶ್ಯ ಕೊಪ್ಪಿಕರ ರಸ್ತೆ, ದೇಶಪಾಂಡೆ ನಗರ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಂಡುಬಂತು. ನೀರಿನಲ್ಲಿ ಸಿಲುಕಿದ್ದ ಸರಕು- ಸಾಮಾಗ್ರಿಗಳನ್ನು ಆರಿಸಿ, ಸ್ವಚ್ಛಗೊಳಿಸಿದರು.
ಎಮ್ಮೆ ಸಾವು:
ತಾಲ್ಲೂಕಿನ ಅಂಚಟಗೇರಿ ಗ್ರಾಮದ ಬಸಪ್ಪ‌ ಮೊರಬದ ಎಂಬುವರ ದನದ ಕೊಟ್ಟಿಗೆ ಕುಸಿದಿದ್ದರಿಂದ ಎಮ್ಮೆ ಮೃತಪಟ್ಟಿದೆ. ಒಂದು ಎತ್ತು ಮತ್ತು ಎರಡು ಆಕಳುಗಳಿಗೆ ಗಂಭೀರ ಗಾಯಗಳಾಗಿವೆ.‌ ಹೆಬಸೂರಿನ ಸರ್ಕಾರಿ‌ ಶಾಲೆಯ ಅಂಗಳ ಜಲಾವೃತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ. ಮಳೆ ಇನ್ನೂ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!