‘ಅಬ್ಬ’ರದ ಮಳೆಗೆ ಸಿಲಿಕಾನ್ ಸಿಟಿ ಹೈರಾಣ: ಅಲ್ಲಿ ಇಲ್ಲಿ ಎಲ್ಲೆಲ್ಲೂ ನೀರೋ ನೀರು!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರಾವಳಿಯನ್ನು ಹೈರಾಣಾಗಿಸಿದ ಬೆನ್ನಿಗೇ ಮಹಾ ಮಳೆ ರಾಜಧಾನಿ ಬೆಂಗಳೂರನ್ನೂ ಶನಿವಾರ ರಾತ್ರಿ ಅಕ್ಷರಶಃ ನಡುಗಿಸಿದೆ.
ಕಳೆದ ರಾತ್ರಿ ಸುರಿದ ಜಡಿಮಳೆಗೆ ಸಿಲಿಕಾನ್ ಸಿಟಿಯ ಜನತೆ ಭಾರೀ ಸಂಕಷ್ಟ ಎದುರಿಸಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

ರಾಜರಾಜೇಶ್ವರಿ ನಗರ ಭಾಗದಲ್ಲಿ ಅತೀ ಹೆಚ್ಚು ಅಂದರೆ 65 ಮಿ.ಮೀ. ಮಳೆಯಾಗಿದೆ. ಪೂರ್ವ ವಲಯದಲ್ಲಿ 61.50, ದಕ್ಷಿಣ ವಲಯದಲ್ಲಿ 59.50, ಬೊಮ್ಮನಹಳ್ಳಿಯಲ್ಲಿ 53, ಪಶ್ಚಿಮ ವಲಯದಲ್ಲಿ 44.50 ಮಿಮೀ ಮಳೆಯಾಗಿದೆ. ಏಕಾಏಕಿ ಕಾಣಿಸಿಕೊಂಡ ಅಬ್ಬರದ ಮಳೆ ಹಲವೆಡೆಗಳಲ್ಲಿ ಕೃತಕ ನೆರೆ ನಿರ್ಮಿಸಿತ್ತು. ಕೆಲವೆಡೆ ತಗ್ಗು ಪ್ರದೇಶ ಜಲಾವೃತವಾಗಿದ್ದರೆ, ಇನ್ನು ಕೆಲವೆಡೆ ಮನೆಗಳಿಗೆ ನೀರುನುಗ್ಗಿ ಆತಂಕ ಹುಟ್ಟಿಸಿತ್ತು.

ನಗರದ ಅಂಬೇಡ್ಕರ್ ವೀಧಿ, ವಿಧಾನಸೌಧದ ಸುತ್ತಮುತ್ತ ಮಳೆ‌ನೀರು ಸಂಚಾರಕ್ಕೆ ಅಡ್ಡಿ ತಂದಿದ್ದವು. ಮೆಜೆಸ್ಟಿಕ್, ಮಲ್ಲೇಶ್ವರಂ, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಶಿವಾನಂದ ಸರ್ಕಲ್ ಮೊದಲಾದೆಡೆ ಕೃತಕ ನೆರೆ ಹೈರಾಣಾಗಿಸಿತು. ಇಂದು ನಗರದಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದ್ದು, ಜನತೆ ನಿಟ್ಟುಸಿರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!