ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………
ಹೊಸದಿಗಂತ ವರದಿ, ಸುಬ್ರಹ್ಮಣ್ಯ:
ಕಡಬ, ಸುಳ್ಯ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಭಾರೀ ಗಾಳಿ ಮಳೆಯಾಗಿದೆ.
ಬಿರುಸಿನ ಗಾಳಿ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಪೇಟೆಯ ವಲ್ಲೀಶ ಸಭಾಂಗಣ ಬಳಿ ಮರವೊಂದು ವಿದ್ಯುತ್ ಪರಿವರ್ತಕದ ಮೇಲೆ ಮುರಿದು ಬಿದ್ದು ವಿದ್ಯುತ್ ಕಂಬ ತುಂಡಾಗಿದೆ. ಪರಿವರ್ತಕಕ್ಕೂ ಹಾನಿಯಾಗಿದೆ.
ಇನ್ನೂ ಕೆಲವೆಡೆ ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬ, ತಂತಿಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಈ ಪ್ರದೇಶದಲ್ಲಿ
ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯಗೊಂಡಿದೆ. ಸುಬ್ರಹ್ಮಣ್ಯ, ಯೇನೆಕಲ್ಲು, ಪಂಜ, ಬಳ್ಪ, ಹರಿಹರ, ಕೊಲ್ಲಮೊಗ್ರು, ಬಿಳಿನೆಲೆ, ನೂಜಿಬಾಳ್ತಿಲ, ರೆಂಜಿಲಾಡಿ, ಕಲ್ಲುಗುಡ್ಡೆ, ಕೊಣಾಜೆ, ಇಚ್ಲಂಪಾಡಿ ವ್ಯಾಪ್ತಿಯಲ್ಲಿಯೂ ಗಾಳಿ ಮಳೆಯಾಗಿದೆ.
ಪರ್ವತಮುಖಿಯಲ್ಲಿ ರಸ್ತೆ ಗೆ ಅಡ್ಡಲಾಗಿ ಮರ ಬಿತ್ತು.ಅದನ್ನು ಸಾಮಾಜಿಕ ಕಾರ್ಯಕರ್ತ ರವಿಕಕ್ಕೆಪದವು ಹಾಗೂ ಪರ್ವತಮುಖಿ ಫ್ರೆಂಡ್ಸ್ ಸದಸ್ಯರು ತೆರವುಗೊಳಿಸಿದರು.