ಭಾರೀ ಪ್ರಮಾಣದ ಮಳೆ- ಗಾಳಿ: ಬೃಹತ್ ಗಾತ್ರದ ಆಲಿಕಲ್ಲುಗಳು ಬಿದ್ದು ಮನೆಗಳಿಗೆ ಹಾನಿ

ಹೊಸದಿಗಂತ ವರದಿ, ಮಡಿಕೇರಿ
ಹಾರಂಗಿಯಲ್ಲಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಗಾಳಿ ಮಳೆಯೊಂದಿಗೆ ಭಾರೀ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದು, ಹಲವು ಬಡ ಕುಟುಂಬಗಳ ಮನೆಗಳು ಜಖಂಗೊಂಡಿವೆ.
ರಾತ್ರಿ ದಿಢೀರನೆ ಭಾರಿ ಗಾಳಿಯೊಂದಿಗೆ ಮಳೆ ಶುರುವಾಗಿದ್ದು, ಸುಮಾರು 6 ಕೆ.ಜಿ. ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಆಲಿಕಲ್ಲುಗಳ ಭಾರಕ್ಕೆ ಹಲವು ಬಡ ಕುಟುಂಬಗಳ ಮನೆಗಳು ಹಾನಿಗೊಳಗಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯ್ಕ ಅವರು ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸುಮಾರು 50-60 ವರ್ಷಗಳಿಂದ 270 ಕ್ಕೂ ಅಧಿಕ ಬಡಕುಟುಂಬಗಳು ಇಲ್ಲಿ ವಾಸವಿದ್ದು, ಹಕ್ಕುಪತ್ರ ದೊರಕದೇ ಇರುವುದರಿಂದ ಗಾಳಿ-ಮಳೆಗಳಿಂದ ಉಂಟಾಗುವ ನಷ್ಟಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ. ಇದರಿಂದಾಗಿ ಹಲವು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದರು.
ಈ ಕುರಿತು ಕೂಡಲೇ ಗಮನ ಹರಿಸಿ ನೊಂದ ಬಡಕುಟುಂಬಗಳಿಗೆ ನೆರವಾಗಬೇಕೆಂದು ಗ್ರಾಮಸ್ಥರ ಪರವಾಗಿ ಜಿಲ್ಲಾಡಳಿತವನ್ನು ಅವರು ಒತ್ತಾಯಿಸಿದ್ದಾರೆ.
ಸ್ಥಳದಲ್ಲಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಶರತ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!