ಹೊಸದಿಗಂತ ವರದಿ, ರಾಯಚೂರು:
ಜಿಲ್ಲೆಯ ಕೆಲವೆಡೆಗಳಲ್ಲಿ ಭಾರಿ ಗಾಳಿ, ಗುಡುಗು ಸಹಿತ ಉತ್ತಮ ಹಾಗೂ ಸಾಧಾರಣದಿಂದ ಕೂಡಿದ ಮಳೆ ಆಗಿದೆ ಈ ಮಳೆ ರೈತರಲ್ಲಿ ಸಂತಸವನ್ನು ತಂದರೆ ಬೇಸಿಗೆಯ ತಾಪಮಾನದಿಂದ ತತ್ತರಿಸಿದ್ದ ಜನತೆಗೆ ಬೇಸಿಗೆಯ ಝಳವನ್ನು ಕಡಿಮೆ ಮಾಡಿದೆ. ಬೇಸಿಗೆ ಸಂದರ್ಭದಲ್ಲಿ ಮುಂಗಾರಿಗೆ ಭೂಮಿಯನ್ನು ಹದಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.
ರಾಯಚೂರು ತಾಲೂಕಿನ ಗಿಲ್ಲೆಸ್ಗೂರು ಕ್ಯಾಂಪ್‌ನ ಸುತ್ತ ಮುತ್ತಲಿನ ಕೆಲವು ಗ್ರಾಮಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದೆ. ರಾಯಚೂರು ನಗರದಲ್ಲಿ ಭಾರಿ ಗಾಳಿ ಬೀಸಿದ ಪರಿಣಾಮನಗರವೆಲ್ಲ ಧೂಳಿನಿಂದ ಆವೃತವಾದಂತೆ ಕಂಡುಬoದಿತು ಆದರೆ ಮಳೆ ಆಗಲಿಲ್ಲ. ಧೂಳಿನಿಂದ ಸಾರ್ವಜನಿಕರು ಕೆಲ ಸಮಯ ತೊಂದರೆಯನ್ನು ಅನುಭವಿಸುವಂತಾಯಿತು. ಜಿಲ್ಲೆಯ ಮಾನ್ವಿ, ಸಿಂಧನೂರು, ಸಿರವಾರ ಸೇರಿದಂತೆ ಇತರೆಡೆಗಳಲ್ಲಿ ತುಂತುರು ಮಳೆ ಆಗಿದೆ.