ಕೊಡಗಿನಾದ್ಯಂತ ಬಿರುಸಿನ ಮಳೆ: ತೆಪ್ಪದಲ್ಲಿ ಪ್ರವಾಹ ದಾಟಿದ ನವ ವಧು-ವರರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೊಡಗಿನಾದ್ಯಂತ ಬಿರುಸಿನ ಮಳೆಯಾಗಿದ್ದು ನಾಪೋಕ್ಲು ವ್ಯಾಪ್ತಿಯ ಹಲವೆಡೆ ರಸ್ತೆಗಳು ಜಲಾವೃತವಾಗಿ.ರಸ್ತೆ ಸಂಪರ್ಕ ಕಡಿತಗೊಂಡಿವೆ. ಇಂತಹ ಬಿರುಸಿನ ಮಳೆಯ ನಡುವೆ ಇಲ್ಲಿಯ ಚೆರಿಯಪರಂಬುವಿನ ವರ ಹಾಗೂ ಮಡಿಕೇರಿಯ ವಧು ವಿವಾಹ ಸಮಾರಂಭ ಜರುಗಿದೆ .

ಕಳೆದ ವಾರ ಮಡಿಕೇರಿಯಲ್ಲಿ ಮದುವೆ ಕಾರ್ಯಕ್ರಮ ಜರುಗಿದ ಬಳಿಕ ವಧುವನ್ನು ಇಲ್ಲಿಯ ಚೆರಿಯಪರಂಬುವಿನ ವರನ ಮನೆಗೆ ಕಳುಹಿಸಿಕೊಡಲಾಗಿತ್ತು. ಹಿಂತಿರುಗಿ ತವರು ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯದಂತೆ (ಇಂದು) ಗುರುವಾರ ವಧುವಿನ ಮನೆಯವರು ವಧುವನ್ನು ಕರೆದುಕೊಂಡು ಹೋಗಲು ವರನ ಮನೆಗೆ ಆಗಮಿಸುವಾಗ ಮಳೆ, ಪ್ರವಾಹದಿಂದಾಗಿ ನಾಪೋಕ್ಲು – ಚೆರಿಯಪರಂಬು ರಸ್ತೆ ಪ್ರಹದಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡು ಇಲ್ಲವಾಗಿದೆ.

ಬಂದವರು ಪರ್ಯಾಯ ಮಾರ್ಗವಾಗಿ ತೆಪ್ಪ ತರಿಸಿ ತೆಪ್ಪದ ಮೂಲಕ ಪ್ರವಾಹದ ನೀರಿನಲ್ಲಿ ಸಾಗಿದ ಮಂದಿ ಚೆರಿಯಪರಂಬುವಿನಲ್ಲಿರುವ ವರ ನ ಮನೆ ತಲುಪಿ ಕಾರ್ಯಕ್ರಮದ ಬಳಿಕ ವಧುವನ್ನು ತವರು ಮನೆಗೆ ಕರೆದುಕೊಂಡು ಹೋಗವ ಸಂಪ್ರದಾಯ ಪಾಲಿಸಲು ಮಹಿಳೆಯರು,ಮಕ್ಕಳು ತೆಪ್ಪದಲ್ಲಿ ಸಾಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!