ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಬೆಳಗಾವಿಯ ಜಿಲ್ಲೆಯಲ್ಲಿ ಪ್ರವಾಹದ ಭೀತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ವರದಿ, ಬೆಳಗಾವಿ:

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಾದ ಬೆಳಗಾವಿಯ ಜಿಲ್ಲೆಯ ಜನರು ಮತ್ತೆ ಪ್ರವಾಹದ ಭೀತಿಯಲ್ಲಿದ್ದಾರೆ.
ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಸೇರಿದಂತೆ ಗಡಿ ಜಿಲ್ಲೆಯ ಭಾಗದ ತಾಲೂಕಗಳಾದ ಚಿಕ್ಕೋಡಿ, ಕಾಗವಾಡ,ರಾಯಭಾಗ, ಅಥಣಿ, ಹುಕ್ಕೇರಿ, ಖಾನಾಪುರ, ಬೆಳಗಾವಿ ನಿಪ್ಪಾಣಿ ಭಾಗಗಳಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.
ಅತ್ತ ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳಲ್ಲಿ ಕೂಡಾ ನಿರಂತರವಾಗಿ ಮಳೆ ಸುರಿಯುತ್ತಿದೆ. ಆದ್ದರಿಂದ ಪ್ರವಾಹದ ಭೀತಿಯನ್ನುಂಟು ಮಾಡುವ ಪ್ರಮುಖ ನದಿ ಕೃಷ್ಣಾ ನದಿ ಈಗ ಎಲ್ಲಡೆ ಮೈದುಂಬಿ ಹರಿಯುತ್ತಿದೆ.
ಆದ್ದರಿಂದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾದ ಮಳೆಗೆ ಕೃಷ್ಣಾ ನದಿಗೆ ಈಗ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ ಇದರಿಂದ ನದಿಯ ಒಳ ಹರಿವು ಹೆಚ್ಚಳವಾಗಿದೆ.  ಮತ್ತು ಅತಿಯಾದ ಮಳೆಗೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವದರಿಂದ, ಈಗಾಗಲೇ ಚಿಕ್ಕೋಡಿ ವ್ಯಾಪ್ತಿಯ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ. ಆದರೆ ಸಂಪರ್ಕಕ್ಕೆ ಸಾರ್ವಜನಿಕರ ಪರ್ಯಾಯ ಮಾರ್ಗದಿಂದ ಸಂಚರಿಸುತ್ತಿದ್ದಾರೆ.
ಇದರ ಜೊತೆಗೆ ಅತ್ತ ಮಹಾರಾಷ್ಟ್ರದ ಕೋಯ್ನಾ,ಕಾಳಮ್ಮವಾಡಿ, ಧೂಮ್ ಮತ್ತು ರಾಧಾನಗರಿ ಜಲಾಯನ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿರುವದರಿಂದ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ ಮತ್ತು ಕೃಷ್ಣಾ ನದಿಯ ಯಡೂರ ಕಲ್ಲೋಳ, ಭೀವಸಿ-ಜತ್ರಾಟ ,ಅಕ್ಕೋಳ ಸಿದ್ನಾಳ ಸೇರಿದಂತೆ ನಾಲ್ಕು ಸೇತುವೆಗಳು ಜಲಾವೃತಗೊಂಡಿವೆ.
ಮಳೆಯು ಹೆಚ್ಚಳವಾಗಿದ್ದರಿಂದ, ಈಗಾಗಲೇ ಜಿಲ್ಲಾಧಿಕಾರಿ ಆದೇಶದಂತೆ ನದಿ ತೀರ ಭಾಗದ ಪ್ರದೇಶದ ಜನರಿಗೆ ನದಿಯ ಕಡೆಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಮತ್ತು ಇದರ ಜತೆ ಹೆಚ್ಚಿನ ನೀರನ್ನು ಪ್ರವಾಹದ ನಿರ್ವಹಣೆ ನಿಯಮಾವಳಿಗಳನ್ನು ಪಾಲಿಸಿ,  ರಾಜಾಪೂರ ಬ್ಯಾರೇಜ್ ನಿಂದ 58000 ಕ್ಯೂಸೆಕ್ ಮತ್ತು ದೂಧಗಂಗಾ ನದಿಯಿಂದ 19,768 ಕ್ಯೂಸೆಕ್ ನೀರುನ್ನು. ಒಟ್ಟು 77,768 ಕ್ಯೂಸೆಕ್ ನಷ್ಟು ಕೃಷ್ಣಾ ನದಿಗೆ ಹರಿದು ಬರುತ್ತಿದೆ‌. ಹಿಪ್ಪರಗಿ ಜಲಾಶಯದಿಂದ 74000 ಕ್ಯೂಸೆಕ್ ನಷ್ಟು ನೀರನ್ನು ಕೂಡಾ ಜಲಾಶಯದಿಂದ ನೀರನ್ನು ಹೊರಗಡೆ ಬೀಡುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡು ಜನರು ಮನೆಯಿಂದ ಹೊರಬರುತ್ತಿಲ್ಲ. ಜಿಲ್ಲೆಯ ಅನೇಕ ಭಾಗಗಳಲ್ಲಿ ಮನೆಗಳ ಗೋಡೆಗಳು ಕುಸಿತಗೊಂಡ ವರದಿಯಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss