ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶ ರಾಜ್ಯದ 8 ಜಿಲ್ಲೆಗಳಲ್ಲಿ ಹಿಮ ಆವರಿಸಿದೆ. ರಾಜಧಾನಿ ಶಿಮ್ಲಾ ಮಳೆ ಮತ್ತು ಹಿಮದ ಅನುಭವವನ್ನು ಮುಂದುವರೆಸಿದೆ. ಶಿಮ್ಲಾದ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳು ಜಾರುತ್ತಿವೆ. ಮನಾಲಿ, ಶಿಮ್ಲಾ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳ ಹಿಮದಿಂದ ಹೆಪ್ಪುಗಟ್ಟಿವೆ. ಶುಕ್ರವಾರ ಸೋಲಾಂಗ್ ನಾಲಾ, ಅಟಲ್ ಸುರಂಗ, ರೋಹ್ತಾಂಗ್ ಪಾಸ್ ಸೇರಿದಂತೆ ಮನಾಲಿ ಪಟ್ಟಣದ ಸುತ್ತಲೂ ಹಿಮ ಬಿದ್ದಿದೆ. ಹಿಮಪಾತದಿಂದಾಗಿ ಅಟಲ್ ಸುರಂಗವನ್ನು ಮುಚ್ಚಲಾಗಿದೆ.