ಹೊಸ ದಿಗಂತ ವರದಿ, ಮಂಗಳೂರು:
ಸುಳ್ಯ ತಾಲೂಕಿನ ಕೇರ್ಪಳ ಗುಡ್ಡೆಯ ದಿನಕೂಲಿ ನೌಕರ ರವೀಂದ್ರ ಅವರ ಪುತ್ರ 19 ವರ್ಷ ಪ್ರಾಯದ ದೀಕ್ಷಿತ್ ಕೆ.ಎಸ್ ಅವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಐಸಿಯುವಿನಲ್ಲಿ ದೀಕ್ಷಿತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತಾಗಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಸುಮಾರು 7 ಲಕ್ಷ ಚಿಕಿತ್ಸಾ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದು, ಇಷ್ಟು ಮೊತ್ತವನ್ನು ಭರಿಸುವ ಸ್ಥಿತಿಯಲ್ಲಿ ಈ ಕುಟುಂಬವಿಲ್ಲ.
ಆದ್ದರಿಂದ ಸಹೃದಯರು ಚಿಕಿತ್ಸೆಗಾಗಿ ನೆರವು ನೀಡಬೇಕೆಂದು ರವೀಂದ್ರ ಅವರು ಮನವಿ ಮಾಡಿದ್ದಾರೆ. ನೆರವು ನೀಡುವ ದಾನಿಗಳು ದೀಕ್ಷಿತ್ ಅವರ ಸಹೋದರ ಮೋಶಿಕ್ ಕೆ.ಆರ್. ಅವರ ಸುಳ್ಯ ಕೆನರಾ ಬ್ಯಾಂಕ್, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಬ್ರಾಂಚ್ನ ಖಾತೆ ಸಂಖ್ಯೆ 8518101009726 ಐಎಫ್ಎಸ್ಸಿ ಸಂಖ್ಯೆ CNRB0008518 ಮೂಲಕ ನೆರವಾಗಬಹುದು. ಹೆಚ್ಚಿನ ಮಾಹಿತಿಗೆ 8495862063 ಸಂಖ್ಯೆಯನ್ನು ಸಂಪರ್ಕಿಸಬಹುದು.