ಶಾಲೆಯಲ್ಲಿ ಡ್ರೆಸ್ ಕೋಡ್​​ ಅನುಸರಿಸಬೇಕು: ಹೈಕೋರ್ಟ್​​​ ತೀರ್ಪು ಸ್ವಾಗತಿಸಿದ ಹೇಮಾ ಮಾಲಿನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶಾಲಾ-ಕಾಲೇಜ್​​ಗಳಲ್ಲಿ ಹಿಜಾಬ್​ ಧರಿಸುವ ಕುರಿತು ಕರ್ನಾಟಕಹೈಕೋರ್ಟ್​ನಿಂದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಈ ಕುರಿತು ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲಸ ಮಾಡುವ ಸ್ಥಳಗಳಲ್ಲಿ ಅಥವಾ ಇತರೆ ಸಂಸ್ಥೆಗಳಲ್ಲಿ ಹಿಜಾಬ್ ಮೇಲೆ ಹೊಸ ನಿಷೇಧ ಹೇರುವ ಅಗತ್ಯವಿಲ್ಲ. ಶಾಲೆಯಲ್ಲಿ ಡ್ರೆಸ್ ಕೋಡ್​​ ಅನುಸರಿಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ಹೈಕೋರ್ಟ್​​​ನ ತೀರ್ಪು ಸ್ವಾಗತ ಮಾಡಿದ್ದಾರೆ.
ಇನ್ನು ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್​ ಮಾತನಾಡಿದ್ದು, ಇಸ್ಲಾಂ ಧರ್ಮ ನಂಬಿಕೆಯ ಆಚರಣೆ ಮೇಲೆ ನಿಂತಿದ್ದು, ಖುರಾನ್​​ನಲ್ಲಿ ಹಿಜಾಬ್​ ಬಗ್ಗೆ ಏಳು ಸಲ ಉಲ್ಲೇಖವಾಗಿದೆ. ಆದರೆ, ಡ್ರೆಸ್​​ ಕೋಡ್​​ ಸಂದರ್ಭದಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿಲ್ಲ ಎಂದಿದ್ದಾರೆ.
ಕರ್ನಾಟಕ ಹೈಕೋರ್ಟ್ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದಿದ್ದು,ಹಿಜಾಬ್​ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆಯೂ ಅಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!