ಮೊಬೈಲ್ ಪಾಸ್‌ವರ್ಡ್ ಕೊಡದ ತಮ್ಮ,ಆತ್ಮಹತ್ಯೆಗೆ ಶರಣಾದ ಅಕ್ಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ಯುವತಿಯೊಬ್ಬಳು ಮೊಬೈಲ್‌ಗಾಗಿ ಪ್ರಾಣಬಿಟ್ಟಿದ್ದಾಳೆ.
ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ರುಚಿತಾಗೆ ಮನೆಯವರೆಲ್ಲ ಫೋನ್ ಬಳಕೆ ಕಡಿಮೆ ಮಾಡುವಂತೆ ಹೇಳಿದ್ದಾರೆ. ಆದರೆ ರುಚಿತಾ ಮಾತು ಕೇಳಿಲ್ಲ.

ರುಚಿತಾ ತಮ್ಮ ಫೋನ್ ಪಾಸ್‌ವರ್ಡ್ ಬದಲಾಯಿಸಿದ್ದಾನೆ. ಪಾಸ್‌ವರ್ಡ್ ಕೊಡುವಂತೆ ರುಚಿತಾ ಕೇಳಿದ್ದು, ತಮ್ಮ ನೀಡಿಲ್ಲ. ಇಬ್ಬರ ನಡುವೆ ಮಾತಿಗೆ ಮಾತು ಆಗಿದ್ದು, ರುಚಿತಾ ಮನನೊಂದಿದ್ದಾಳೆ. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!