Thursday, August 18, 2022

Latest Posts

ತಾಯಿ ಜೊತೆ ಹೋಗಿ ಕೊರೋನಾ ಲಸಿಕೆ ಪಡೆದುಕೊಂಡ ಶಾಸಕ ಡಾ.ಅಜಯ್ ಸಿಂಗ್

ಹೊಸ ದಿಗಂತ ವರದಿ, ಕಲಬುರಗಿ:

ಇಲ್ಲಿನ ಜಿಮ್ಸ್ ಆಸ್ಪತ್ರೆ ಕೇಂದ್ರದಲ್ಲಿ ಜೇವರ್ಗಿ ಶಾಸಕ, ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಕೋವಿಡ್ ಲಸಿಕೆ ಹಾಕಿಸಿಕೊಂಡರು. ತಮ್ಮ ತಾಯಿ ಪ್ರಭಾವತಿ ಧರಂಸಿಂಗ್ ಜೊತೆಗೂಡಿ ಕೇಂದ್ರಕ್ಕೆ ಬಂದಿದ್ದ ಡಾ. ಅಜಯ್‍ಸಿಂಗ್ ತಾಯಿ ಲಸಿಕೆ ಪಡೆದ ನಂತರ ತಾವೂ ಲಸಿಕೆ ಪಡೆದು ಅಲ್ಲೇ ಅರ್ಧ ಗಂಟೆ ಕುಳಿತು ವೈದ್ಯರ ಸಲಹೆಯಂತೆ ಮನೆಗೆ ತೆರಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಜಯ್ ಸಿಂಗ್ ಅಮೆರಿಕಾ ಸೇರಿದಂತೆ ಬೇರೆ ಬೇರೆ ರಾಷ್ಟ್ರ ಗಳು ತಮ್ಮ ಪ್ರಜೆಗಳಿಗೆ ಕೊರೋನಾ ಲಸಿಕೆ ಉಚಿತವಾಗಿ ಹಂಚುತ್ತಿವೆ. ಆದರೆ, ಭಾರತ 500 ರು ದಿಂದ 1800 ರು ವರೆಗೆ ಬೆಲೆ ನಿಗದಿ ಮಾಡಿದೆ. ಲಸಿಕೆಯನ್ನು ಉಚಿತವಾಗಿ ಯಾಕೆ ಒದಗಿಸಲಿ ಎಂದು ಆಗ್ರಹಿಸಿದರು.
ದೇಶಾದ್ಯಂತ ನಡೆದ ಉಚಿತ ಲಸಿಕಾ ಕಾರ್ಯಕ್ರಮದಿಂದಾಗಿ ಇಂದು ದೇಶ ಪೊಲೀಯೋ ಮುಕ್ತವಾಗಿದೆ. ಕೊರೋನಾದಂತಹ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ವಿತರಿಸಬೇಕಿರುವುದು ಅವಶ್ಯಕತೆಯಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಕೂಡಾ ಅವರಿಗೆ ಹಣ ಸಂಗ್ರಹಿಸಲು ಅನಮತಿ ಕೊಟ್ಟಿರುವುದು ಸರಿಯಲ್ಲವೆಂದು ಡಾ. ಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಮೇರಿಕಾ, ಕೆನಡಾ, ಇಂಗ್ಲೆಂಡ್ ಹಾಗೂ ಪಾಕಿಸ್ಥಾನಗಳಲ್ಲಿ ಕೊರೋನಾಗೆ ಉಚಿತ ಉಸಿಕೆ ಹಂಚುತ್ತಿರುವಾಗ ಭಾರತ ಹಣ ನಿಗದಿಪಡಿಸಿದ್ದು ಸರಿಯಲ್ಲ. ಇದರಿಂದಾಗಿ ಲಸಿಕಾ ಅಭಿಯಾನಕ್ಕೆ ಅಡ್ಡಿ ಉಂಟಾಗುವು ಅಪಾಯಗಲೇ ಅಧಿಕ ಎಂದಿರುವ ಅವರು ಕೇಂದ್ರ ಸರ್ಕಾರ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!