ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕ್ರಿಕೆಟಿಗ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮ ಅವರ ಮುದ್ದಾದ ಮಗಳು ವಮಿಕಾಗೆ 6 ತಿಂಗಳು ಪೂರ್ಣಗೊಂಡಿದ್ದು, ಈ ಸಂಭ್ರಮವನ್ನು ಸಣ್ಣ ಪಿಕ್ ನಿಕ್ ಹೋಗುವ ಮೂಲಕ ಆಚರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಕುಟುಂಬ ಅಲ್ಲಿನ ಪಾರ್ಕ್ ಒಂದರಲ್ಲಿ ಮಗಳ 6 ತಿಂಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಈ ಸಂತಸದ ದೃಶ್ಯಗಳನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ಅವಳ ಒಂದು ನಗೆ ನಮ್ಮ ಸುತ್ತಲ ಜಗತ್ತನ್ನು ಬದಲಾಯಿಸಬಲ್ಲದು! ನಮ್ಮೂವರಿಗೂ 6 ತಿಂಗಳ ಸಂಭ್ರಮ ಎಂದು ಅಡಿಬರಹ ಕೊಟ್ಟಿದ್ದಾರೆ.
ಎರಡೂ ಫೋಟೋಗಳಲ್ಲಿ ವಿರುಷ್ಕಾ ದಂಪತಿ ಮಗುವಿನ ಮುಖವನ್ನು ರಿವೀಲ್ ಮಾಡದಿರಲು ತೀರ್ಮಾನಿಸಿದ್ದು, ಬ್ಯಾಕ್ ಪೋಸ್ ನಲ್ಲಿ ಕೋಹ್ಲಿ ಹಾಗೂ ಅನುಷ್ಕಾ ಮೇಲೆ ಮಲಗಿ ಆಕಾಶ ನೋಡುತ್ತಿರುವ ವಮಿಕಾಳ ಫೋಟೋವನ್ನು ಹಂಚಿಕೊಂಡಿದ್ದಾರೆ.