ದೇಶದಾದ್ಯಂತ ಚರ್ಚೆಯಾಗ್ತಿರೋ ಅದಾನಿ ಪ್ರಕರಣದ ಕುರಿತು ನೀವು ತಿಳಿದುಕೊಳ್ಳಬೇಕಿರೋ 10 ಅಂಶಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನಪಡೆದಿದ್ದ ಬಿಲಿಯನೇರ್‌ ಗೌತಮ್‌ ಅದಾನಿಯವರ ʼಅದಾನಿಸಮೂಹʼದ ಕುರಿತಾಗಿ ಕಳೆದೊಂದು ವಾರದಿಂದ ದೇಶದಾದ್ಯಂತ ಚರ್ಚೆಯಾಗ್ತಿದೆ. ಅಮೆರಿಕದ ಹಿಂಡೆನ್‌ ಬರ್ಗ್‌ ಅನ್ನೋ ಸಂಸ್ಥೆಯೊಂದು ಅದಾನಿ ಸಮೂಹದ ಕುರಿತಾಗಿ ತನಿಖಾ ರದಿಯೊಂದನ್ನು ಪ್ರಕಟಿಸಿ ಅದರಲ್ಲಿ ಅದಾಮಿ ಸಮೂಹವು ಹೆಚ್ಚಿನ ಸಾಲ ಹೊಂದಿದ್ದು ಕಂಪನಿಯ ಆರ್ಥಿಕತೆಯ ಕುರಿತಾಗಿ ಕಳವಳ ವ್ಯಕ್ತಪಡಿಸಿತ್ತು. ಈ ವರದಿ ಬಂದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ಅದಾನಿ ಸಮೂಕಹವು ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯವನ್ನು ಕಳೆದುಕೊಂಡಿದೆ. ಇದೇ ವಿಷಯವು ದೇಶದ ಸಂಸತ್ತಿನಲ್ಲಿಯೂ ಪ್ರಸ್ತಾಪವಾಗಿದ್ದು ಪ್ರತಿಪಕ್ಷಗಳು ಪ್ರಕರಣದ ತನಿಖೆಗೆ ಒತ್ತಾಯಿಸಿ ಅಧಿವೇಶನಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸದನವನ್ನು ಇಂದೂ ಕೂಡ ಮುಂದೂಡಲಾಗಿದೆ. ಈ ಕುರಿತು ನೀವು ತಿಳಿಯಬೇಕಿರೋ ಕೆಲ ಸಂಗತಿಗಳು ಇಲ್ಲಿವೆ

  • ಷೇರುಪೇಟೆಯನ್ನು ಕಂಗೆಡಿಸಿರುವ ಅದಾನಿ ಸಮೂಹದ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಸದನದಲ್ಲಿ ಗಲಾಟೆ ಎಬ್ಬಿಸಿವೆ. ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲಿಯೂ ಅದಾನಿ ಪ್ರಕರಣದ ಕುರಿತು ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್‌, ಆಪ್‌, ಟಿಎಂಸಿ ಸೇರಿದಂತೆ ಇತರ ವಿರೋಧ ಪಕ್ಷಗಳು ಆಗ್ರಹಿಸಿದ ಕಾರಣ ನಿನ್ನೆಯೂ ಸದನವನ್ನು ಮುಂದೂಡಲಾಗಿತ್ತು. ಆದರೆ ವಿರೋಧಪಕ್ಷಗಳು ಇಂದೂ ಕೂಡ ಚರ್ಚೆಗೆ ಪಟ್ಟು ಹಿಡಿದು ಕುಳಿತಿದ್ದು ಇಂದೂಕೂಡ ಉಭಯ ಸದನಗಳು ಮುಂದೂಡಲ್ಪಟ್ಟಿವೆ.
  • ಈ ಸಂಬಂಧ ವಿರೋಧ ಪಕ್ಷದ ನಾಯಕ ಹಾಗು ಕಾಂಗ್ರೆ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿರೋಧ ಪಕ್ಷಗಳ ಸಭೆ ಕರೆದಿದ್ದು 16 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಭಾಗಿಯಾಗಿವೆ. ಅದಾನಿ ಪ್ರಕರಣದ ತನಿಖೆಗೆ ಸದನದ ಸಮಿತಿಯಿಂದ ಅಥವಾ ಸುಪ್ರಿಂ ಕೋರ್ಟ್‌ ನೇಮಿಸಿದ ನ್ಯಾಯಾಂಗ ಸಮಿತಿಯಿಂದ ತನಿಖೆ ನಡೆಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
  • ಅದಾನಿ ಕುರಿತು ಚರ್ಚೆಗೆ ಅನುಮತಿ ಸಿಗುವವರೆಗೂ ಸದನದಿಂದ ಹೊರಗುಳಿಯುವ ಅಥವಾ ಸದನವನ್ನು ಮುಂದುವರಿಸಲು ಬಿಡದಿರುವ ನಿರ್ಧಾರವನ್ನು ವಿರೋಧಪಕ್ಷಗಳು ಕೈಗೊಂಡಿದ್ದು ಒಂದುವೇಳೆ ಅನುಮತಿಸದಿದ್ದರೆ ಸಂಸತ್ತಿನಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
  • ಈ ನಡುವೆ ಅದಾನಿ ಸಮೂಹದ ಷೇರುಗಳು ಮಾರುಕಟ್ಟೆಯಲ್ಲಿ ಮತ್ತೂ ಕುಸಿದಿದ್ದು ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇಕಡಾ 30 ಕ್ಕಿಂತ ಹೆಚ್ಚು ಕುಸಿದಿವೆ. ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಗಳ ಷೇರುಗಳ ವಹಿವಾಟು ಕೂಡ ಸ್ಥಗಿತಗೊಂಡಿದೆ ಸ್ಥಗಿತಗೊಂಡಿದೆ.
  • ಲಭ್ಯವಿರೋ ಮಾಹಿತಿಯ ಪ್ರಕಾರ ಅದಾನಿ ಸಮೂಹದ ಪ್ರಮುಖ ಹತ್ತು ಕಂಪನಿಗಳ ಷೇರುಗಳು ಒಟ್ಟಾರೆಯಾಗಿ 120 ಶತಕೋಟಿ ಡಾಲರ್‌ ಗೂ ಅಧಿಕ ನಷ್ವವನ್ನು ಅನುಭವಿಸಿದೆ.
  • ಈ ಹಿಂದೆ ಅದಾನಿ ಸಮೂಹವು ಹಿಂಡೆನ್‌ಬರ್ಗ್‌ ವರದಿಗೆ 413 ಪುಟಗಳ ಸುಧೀರ್ಘ ಉತ್ತರ ನೀಡಿ ಇದು ʼಭಾರತದ ಉದ್ದಿಮೆಗಳು ಜಾಗತಿಕವಾಗಿ ಬೆಳೆಯದಂತೆ ತಡೆಯುವ ಭಾರತದ ಮೇಲಿನ ಲೆಕ್ಕಾಚಾರದ ದಾಳಿʼ ಎಂದು ಆರೋಪಿಸಿತ್ತು. ಅಲ್ಲದೇ ತನ್ನ ಹೂಡಿಕೆದಾರರನ್ನು ಒಗ್ಗೂಡಿಸಿ 20 ಸಾವಿರ ಕೋಟಿ ರೂ.ಗಳ ಫಾಲೋಅಪ್‌ ಎಫ್‌ಪಿಒ ವನ್ನು ಬಿಡುಗಡೆಗೊಳಿಸಿತ್ತು. ಹೂಡಿಕೆದಾರರು ಖರೀದಿಸಿದ್ದರು. ಆದರೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಯ ಷೇರು ಕುಸಿತ ಮುಂದುವರೆದಿತ್ತು. ಇದು ಕಂಪನಿಗೆ ಗಂಭಿರ ನಷ್ಟವನ್ನು ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರ ಹಿತ ಕಾಪಾಡುವ ಕಾರಣ ನೀಡಿ ಅದಾನಿ ಸಮೂಹವು ಎಫ್‌ಪಿಒವನ್ನು ಹಿಂಪಡೆದಿತ್ತು.
  • ಇದೀಗ ಶುಕ್ರವಾರವೂ ಷೇರುಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಕಂಪನಿಯ ಷೇರುಗಳು ಕುಸಿದಿದ್ದು ಅದಾನಿ ಸಮೂಹದ ನಷ್ಟ ಮುಂದುವರೆದಿದೆ.
  • ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಎಲ್‌ಐಸಿ (LIC), ಹಾಗು ಎಸ್‌ಬಿಐ (SBI) ಗಳೂ ಕೂಡ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದವು. ಆದರೆ ಅದಾನಿ ಕಂಪನಿಯ ಷೇರುಗಳ ಕುಸಿತದಿಂದ ಇವುಗಳಿಗೂ ನೂರಾರು ಕೋಟಿ ನಷ್ಟವುಂಟಾಗಿದೆ. ಆದರೆ ತಮ್ಮ ಹೂಡಿಕೆಯು ರಿಸರ್ವ್‌ ಬ್ಯಾಂಕ್‌ ನಿಯಮಗಳಿಗೆ ಅನುಗುಣವಾಗಿಯೇ ಇದ್ದು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಎಲ್‌ಐಸಿ (LIC), ಹಾಗು ಎಸ್‌ಬಿಐ (SBI) ಪ್ರಮುಖರು ಹೇಳಿದ್ದಾರೆ.
  • ಅದಾನಿ ಸಮೂಹದ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಫೆಬ್ರವರಿ 6 ರಂದು ದೇಶದಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ ನೀಡಿದೆ. ಎಲ್‌ಐಸಿ (LIC), ಹಾಗು ಎಸ್‌ಬಿಐ (SBI) ಕಚೇರಿಗಳೆದುರು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!