ಮೂತ್ರಪಿಂಡಗಳು ಮಾನವನ ದೇಹದಲ್ಲಿನ ಬಹಳ ಮುಖ್ಯವಾದ ಅಂಗ. ದೇಹದಲ್ಲಿನ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯಲು ಮೂತ್ರಪಿಂಡಗಳು ಆರೋಗ್ಯವಾಗಿ ಇರಲೇ ಬೇಕು.
ಇಂದಿನ ದಿನಮಾನಗಳಲ್ಲಿ ತುಂಬಾ ಜನರಲ್ಲಿ ಮೂತ್ರಪಿಂಡದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದರೆ ಹೆಚ್ಚಿನ ಜನರಿಗೆ ಇದು ಯಾವ ಸಮಸ್ಯೆ ಎಂದು ಗುರುತಿಸಲಾಗುವುದಿಲ್ಲ. ಕಿಡ್ನಿ ವೈಫಲ್ಯದ ಲಕ್ಷಣಗಳು ಇಲ್ಲಿದೆ. ನಿಮ್ಮಲ್ಲೂ ಈ ತರಹದ ಸಮಸ್ಯೆಗಳಿದ್ದರೆ ತಕ್ಷಣವೇ ವೈದ್ಯರನ್ನು ಬೇಟಿ ಮಾಡಿ.
- ಮೂತ್ರ ವಿಸರ್ಜನೆ ಕಡಿಯಾಗುವುದು.
- ದೇಹದ ಇತರ ಭಾಗಗಳಲ್ಲಿ ಹಾಗೂ ಪಾದಗಳಲ್ಲಿ ಊತ ಕಂಡುಬರುವುದು.
- ಹೆಚ್ಚು ಆಯಾಸವಾಗುವುದು.
- ರಕ್ತದಲ್ಲಿ ಪೊಟ್ಯಾಸಿಯಮ್ ಅಧಿಕವಾಗುವುದು .
- ಶ್ವಾಸಕೋಶದಲ್ಲಿ ನೀರು ತುಂಬುವುದು.
- ಉಸಿರಾಟದಲ್ಲಿ ಸಮಸ್ಯೆಯಾಗುವುದು.
- ವಾಂತಿ, ವಾಕರಿಕೆ ಬರುವುದು.
- ತೂಕ ಕಡಿಮೆ ಯಾಗುವುದು.
- ಹಸಿವು ಆಗದಿರುವುದು.
- ಅನಾರೋಗ್ಯದಿಂದಾಗಿ ಇಡೀ ದೇಹದಲ್ಲಿ ಊತ ಹೆಚ್ಚಾಗುವುದು ಹಾಗೂ ತೂಕ ಹೆಚ್ಚಾಗುವುದು.
- ಬೆಳಗ್ಗೆ ಎದ್ದ ಮೇಲೆ ಕಣ್ಣು ಮತ್ತು ಮುಖ ಊದಿಕೊಳ್ಳುವುದು.
- ರಕ್ತಸ್ರಾವ ಮತ್ತು ರಕ್ತಹೀನತೆಯಾಗುವುದು.
- ದೇಹದ ತುರಿಕೆ, ಬೆನ್ನು ನೋವು ಕಂಡುಬರುವುದು.
- ರಾತ್ರಿ ಸಮಯದಲ್ಲಿ ಅತಿಯಾದ ಮೂತ್ರ ವಿಸರ್ಜನೆಯಾಗುವುದು.
- ನೆನಪಿನ ಶಕ್ತಿ ಕಡಿಮೆಯಾಗುವುದು.
- ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ.
- ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಾರದಿರುವುದು.
- ಮಹಿಳೆಯರ ಮುಟ್ಟಿನ ಚಕ್ರದಲ್ಲಿ ಹೆಚ್ಚು ಕಡಿಮೆಯಾಗುವುದು.
- ಮೂಳೆಗಳು ದುರ್ಬಲಗೊಳ್ಳುವುದು.