ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಕ್ಯಾರೆಟ್
ಶುಂಠಿ
ಹಸಿಮೆಣಸಿನ ಕಾಯಿ
ಅರಿಶಿಣ ಪುಡಿ
ಅಚ್ಚ ಖಾರದ ಪುಡಿ
ಮಾವಿನ ಪುಡಿ
ಜೀರಿಗೆ ಪುಡಿ
ಉಪ್ಪು
ಎಣ್ಣೆ
ಗೋಧಿ ಹಿಟ್ಟು
ನೀರು
ಮಾಡುವ ವಿಧಾನ:
* ಮೊದಲು ಕ್ಯಾರೆಟ್ ತುರಿದುಕೊಂಡು ಅದನ್ನು ಹಿಂಡಿ ಅದರ ರಸ ತೆಗೆಯಿರಿ.
* ಈಗ ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ತುರಿದ ಶುಂಠಿಯನ್ನು ಹಾಕಿ. ನಂತರ ಕ್ಯಾರೆಟ್ ತುರಿ, ಉಪ್ಪು, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಮಾವಿನ ಪುಡಿ, ಅಚ್ಚ ಖಾರದ ಪುಡಿ, ಅರಿಶಿಣ ಪುಡಿ ಹಾಕಿ ಸಣ್ಣ ಉರಿಯಲ್ಲಿ 4-5 ನಿಮಿಷ ಹುರಿದು ಬೇಯಿಸಿ.
* ಬೆಂದ ನಂತರ ಅದನ್ನು ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.
* ಈಗ ಪರೋಟ ಮಾಡಲು ಹಿಟ್ಟನ್ನು ಕಲಸಿಕೊಳ್ಳಿ
* ಸಣ್ಣ ಉಂಡೆ ಮಾಡಿಕೊಂಡು ಸಣ್ಣ ಚಪಾತಿ ಹಾಗೆ ಲಟ್ಟಿಸಿಕೊಳ್ಳಿ.
* ಇದರೊಳಗೆ ಮಾಡಿಟ್ಟುಕೊಂಡ ಕ್ಯಾರೆಟ್ ಪಲ್ಯ/ಹೂರಣವನ್ನು ಇಟ್ಟು ಮುಚ್ಚಿ. * ಅದನ್ನು ನಿಧಾನವಾಗಿ ಗುಂಡಗೆ ತಟ್ಟಿ.
* ನಂತರ ಹೆಂಚಿನ ಮೇಲೆ ಹಾಕಿ ಬೇಯಿಸಿ.