ಕಣ್ಣಿಗೆ ಹಬ್ಬ, ಮನಸ್ಸಿಗೆ ಹಿತ ಈ ಚಾಕೋಲೆಟ್‌ ಪ್ಯಾನ್‌ಕೇಕ್‌ ರೆಸಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಾಕೋಲೆಟ್‌ ಪ್ರಿಯರಿಗೆ ವಿಭಿನ್ನವಾಗಿ ಏನಾದರೂ ತಿನ್ನಬೇಕು ಅನ್ನಿಸಿದಾಗ ಒಮ್ಮೆ ಈ ಚಾಕೋಲೆಟ್‌ ಪ್ಯಾನ್‌ಕೇಕ್‌ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು :
ಮೈದಾ ಹಿಟ್ಟು
ಸಕ್ಕರೆ ಪುಡಿ
ಮೊಟ್ಟೆಯ ಬಿಳಿಭಾಗ
ಬೇಕಿಂಗ್‌ ಪೌಡರ್‌
ವೆನಿಲ್ಲಾ ಎಸೆನ್ಸ್
ಕೋಕೋ ಪೌಡರ್
ವಿಪ್ಡ್ ಕ್ರೀಮ್
ತುಪ್ಪ

ಮಾಡುವ ವಿಧಾನ :
* ಒಂದು ಬಟ್ಟಲಿಗೆ ಮೈದಾ ಹಿಟ್ಟು, ಸಕ್ಕರೆ ಪುಡಿ, ಕೋಕೋ ಪೌಡರ್, ವೆನಿಲ್ಲಾ ಎಸೆನ್ಸ್, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಎಗ್ ವೈಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ.
* ಒಂದು ಚಮಚ ಬ್ಯಾಟರ್ ಹಾಕಿ ಮತ್ತು ಅದನ್ನು ಬೇಯಲು ಬಿಡಿ. ಎರಡೂ ಬದಿಯಲ್ಲೂ ತಿರುಗಿಸಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
* ಎರಡೂ ಕಡೆಯಿಂದ ಬೇಯಿಸಿದ ನಂತರ ಅದನ್ನು ತಟ್ಟೆಯಲ್ಲಿ ಹಾಕಿ ಅದಕ್ಕೆ ವಿಪ್ಡ್‌ ಕ್ರೀಮ್‌ ಹಾಕಿ ಅಲಂಕರಿಸಿದರೆ ಚಾಕೋಲೆಟ್‌ ಪ್ಯಾನ್‌ಕೇಕ್‌ ರೆಸಿಪಿ ಸಿದ್ದಗೊಳ್ಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!