Food Recipe | ಚಳಿಗಾಲದಲ್ಲಿ ಅನ್ನದ ಪದಾರ್ಥ ಬೇಜಾರ್, ಎಣ್ಣೆ ಪದಾರ್ಥ ಒಳ್ಳೆಯದಲ್ಲ.. ಹಾಗಾದ್ರೆ ಇದನ್ನು ತಿನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಳಿಗಾಲದಲ್ಲಿ ಬೆಳಗೆದ್ದು ಅನ್ನ ತಿನ್ನೋದು ಅಂದ್ರೆ ಬೇಜಾರು, ಕುರುಂ ಕುರುಂ ಎನ್ನುವ ಎಣ್ಣೆ ಪದಾರ್ಥ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದ್ರೆ ಬೆಳಗೆದ್ದು ಯಾವ ತಿಂಡಿಯನ್ನು ಮಾಡಿದ್ರೆ ಇಷ್ಟ ಆಗಬಹುದು ಅಂತ ಯೋಚಿಸ್ತಿದಿರಾ ? ಹಾಗಿದ್ರೆ ಮಾಡಿ ಆರೋಗ್ಯಕರ ಮಸಾಲ ಇಡ್ಲಿ. ಬನ್ನಿ ಮಸಾಲ ಇಡ್ಲಿ ಮಾಡುವುದು ಹೇಗೆ ಮತ್ತು ಬೇಕಾಗುವ ಸಾಮಗ್ರಿಗಳನ್ನು ತಿಳಿಯೋಣ.

ಬೇಕಾಗುವ ಸಾಮಗ್ರಿಗಳು :

ರವೆ
ಮೊಸರು
ಎಣ್ಣೆ
ಹಸಿಮೆಣಸಿನಕಾಯಿ
ಉದ್ದಿನ ಬೇಳೆ
ಸಾಸಿವೆ
ಕಾಯಿತುರಿ
ಇಂಗು
ಕೊತ್ತಂಬರಿ
ಕರಿಬೇವು
ಉಪ್ಪು
ಕ್ಯಾರೆಟ್‌ ತುರಿ
ಸಬ್ಬಸಿಗೆ ಸೊಪ್ಪು

ಮಾಡುವ ವಿಧಾನ :
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಚೆನ್ನಾಗಿ ಬಾಡಿಸಿ ನಂತರ ರವೆಯನ್ನು ಹಾಕಬೇಕು. ರವೆ ಹುರಿಯಬೇಕು. ಹುರಿದು ತಣ್ಣಗಾದ ಬಳಿಕ ಉಪ್ಪು, ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ ಮೊಸರನ್ನು ಹಾಕುತ್ತ ಇಡ್ಲಿ ಹಿಟ್ಟಿನ ಹದಕ್ಕೆ ಬರುವವರೆಗೆ ಕಲಿಸಬೇಕು.

ಸ್ವಲ್ಪ ಕಾಯಿತುರಿ, ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ನಂತರ ಎಣ್ಣೆ ಸವೆರಿದ ಇಡ್ಲಿ ತಟ್ಟೆಗೆ ಒಂದೊಂದು ಗೋಡಂಬಿ ಇಟ್ಟ ಮೇಲೆ ಕ್ಯಾರೆಟ್ ತುರಿ ಮಿಕ್ಸ್ ಮಾಡಿದ್ದನ್ನು ಹದವಾಗಿ ಹರಡಿ ಮೊಸರು ಸೇರಿಸಿ ಕಲೆಸಿದ ಹಿಟ್ಟನ್ನು ಹಾಕಿ ಕುಕ್ಕರನ್ನು ಸ್ಟೌವ್ ಮೇಲೆ ಇಡಿ. 10 ನಿಮಿಷಕ್ಕೆ ಕುಕ್ಕರ್ ಆಫ್ ಮಾಡಿದ್ಮೇಲೆ ಚಪ್ಪರಿಸಿ ರುಚಿಯಾದ ಆರೋಗ್ಯಕರ ಮಸಾಲ ಇಡ್ಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!