FOOD RECIPE | ಹೈ ಪ್ರೊಟೀನ್‌ ಸೋಯಾ ಚಂಕ್ಸ್‌ ದೋಸೆ ತಿಂದಿದ್ದೀರಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತಮ ಆಹಾರ ಉತ್ತಮ ಆರೋಗ್ಯವನ್ನು ನೀಡುತ್ತದೆ. ದೇಹಕ್ಕೆ ಬೇಕಾದ ಪ್ರೊಟೀನ್‌ ವಿಟಮಿನ್‌ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದು. ಹಾಗಾಗಿ ಬೆಳಗ್ಗೆಎದ್ದ ತಕ್ಷಣ ದೆಹಕ್ಕೆ ಪ್ರೊಟೀನ್‌ ನೀಡುವಂತಹ ಯಾವ ಅಡುಗೆ ತಯಾರಿ ಮಾಡಬೇಕು ಎಂದು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಒಮ್ಮೆ ಟ್ರೈ ಮಾಡಿ ಸೋಯಾ ಚಂಕ್ಸ್‌ ದೋಸೆ.

ಬೇಕಾಗುವ ಪದಾರ್ಥಗಳು :

ಸೋಯಾ ಚಂಕ್ಸ್

ಟೊಮೆಟೊ

ಒಣ ಮೆಣಸಿನಕಾಯಿ

ಶುಂಠಿ

ನೀರು

ಉಪ್ಪು

ಗೋಧಿ ಹಿಟ್ಟು

ಅಕ್ಕಿ ಹಿಟ್ಟು

ಈರುಳ್ಳಿ

ಕ್ಯಾರೆಟ್

ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :

ಮೊದಲು ಒಂದು ಕಪ್ ಸೋಯಾ, ಟೊಮೆಟೊ, ಒಣಮೆಣಸಿನಕಾಯಿ, ಶುಂಠಿ, ನೀರು ಮತ್ತು ಉಪ್ಪನ್ನು ಹಾಕಿ ಕುದಿಸಿ.

ಇನ್ನೊಂದೆಡೆ ಟೊಮೆಟೊ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಪೇಸ್ಟ್‌ ಮಾಡಿಕೊಳ್ಳಿ.

ಸೋಯಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ಟೊಮೊಟೊ ಪೇಸ್ಟ್ ಮತ್ತು ಉಪ್ಪು ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ಮಿಶ್ರಣ ಮಾಡಿ. ನಂತರ ಈರುಳ್ಳಿ, ಕ್ಯಾರೆಟ್ ಮತ್ತು ಕೊತ್ತಂಬರಿ ಹಾಕಿ ಕಲೆಸಿ.

ಈಗ ಒಂದು ಪ್ಯಾನ್ ತೆಗೆದುಕೊಂಡು ಎಣ್ಣೆ ಹಚ್ಚಿ, ಮಿಶ್ರಣವನ್ನು ರೊಟ್ಟಿ ಹಾಗೆಯೇ ತಟ್ಟಿ ಅಥವಾ ದೋಸೆಯ ರೀತಿ ಹಾಕಿ ಬೇಯಿಸಿದರೆ ಪ್ರೋಟೀನ್‌ ಭರಿತ ಸೋಯಾ ಚಂಕ್ಸ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!