ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
*ಹಾಗಲಕಾಯಿ
*ಚನ್ನಾ ದಾಲ್
*ಜೀರಿಗೆ
*ಸಾಸಿವೆ
*ಕರಿಬೇವಿನೆಲೆ
*ಕೆಂಪು ಮೆಣಸು
*ಬೆಳ್ಳುಳ್ಳಿ
*ತೆಂಗಿನ ಕಾಯಿ
*ಅರಶಿನ ಹುಡಿ
*ಮೆಣಸಿನ ಹುಡಿ
*ಉಪ್ಪು
*ಎಣ್ಣೆ
ಮಾಡುವ ವಿಧಾನ:
1. ಮೊದಲು ಕತ್ತರಿಸಿದ ಹಾಗಲಕಾಯಿ ತುಂಡುಗಳನ್ನು ಉಪ್ಪು ಮತ್ತು ಅರಶಿನ ಹುಡಿ ಹಾಕಿ 10 – 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
2. ಹಾಗಲಕಾಯಿ ಕಹಿ ರಸವನ್ನು ನಿಮ್ಮ ಕೈಯಿಂದ ಹಿಂಡಿ ತೆಗೆದಿಡಿ.
3. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಹಾಗಲಕಾಯಿಯನ್ನು 4-5 ನಿಮಿಷಗಳ ಕಾಲ ಹುರಿಯಿರಿ.
4. ಹುರಿದ ಹಾಗಲಕಾಯಿ ತುಂಡುಗಳನ್ನು ತಟ್ಟೆಗೆ ವರ್ಗಾಯಿಸಿ.
5. ತೆಂಗಿನ ಕಾಯಿ, ಬೆಳ್ಳುಳ್ಳಿ ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಪೌಡರ್‌ನಂತೆ ರುಬ್ಬಿಕೊಳ್ಳಿ.
6. ಪ್ಯಾನ್‌ನಲ್ಲಿ ಎರಡು ಸ್ಪೂನ್‌ನಷ್ಟು ಎಣ್ಣೆಯನ್ನು ತೆಗೆದುಕೊಂಡು ಇದಕ್ಕೆ ಜೀರಿಗೆ, ಚನ್ನಾ ದಾಲ್, ಸಾಸಿವೆ, ಕೆಂಪು ಮೆಣಸು, ಕರಿಬೇವನ್ನು ಹಾಕಿ ಹುರಿಯಿರಿ.
7. ಹುಡಿ ಮಾಡಿದ ತೆಂಗಿನ ಕಾಯಿ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ ಬೇಯಿಸಿ.
8. ಚೆನ್ನಾಗಿ ಹುರಿದ ಹಾಗಲಕಾಯಿ ತುಂಡುಗಳನ್ನು ಪ್ಯಾನ್‌ಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.
9. ಅದಕ್ಕೆ ಉಪ್ಪು ಸೇರಿಸಿ ಮತ್ತು ಸ್ವಲ್ಪ ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ ಮತ್ತು ಬಡಿಸಿ. ಗರಿಯಾದ ಹಾಗಲಕಾಯಿ ಫ್ರೈ ಸವಿಯಲು ಸಿದ್ಧ.