FOOD RECIPE | ರುಚಿಯಾದ ಬಾಯಿ ಚಪ್ಪರಿಸುವ ಮಾವಿನಕಾಯಿ ಚಿತ್ರಾನ್ನ ರೆಸಿಪಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಲ ಕಾಲಕ್ಕೆ ಸಿಗುವ ಹಣ್ಣು ತರಕಾರಿಗಳನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಬೆಳಗೆದ್ದು ಏನ್‌ ತಿಂಡಿ ಮಾಡ್ಬೇಕು ಎಂದು ಆಲೋಚಿಸುವವರು ಮಾಡಿ ಮಾವಿನಕಾಯಿ ಚಿತ್ರಾನ್ನ. ಮಾರುಕಟ್ಟೆಯಲ್ಲಿ ಸಿಗುವ ಮಾವಿಯನಕಾಯಿ ಅನ್ನು ಬಳಸಿಕೊಂಡು ಚಿತ್ರಾನ್ನ ಮಾಡುವುದು ಹೇಗೆ ಮತ್ತು ಅದಕ್ಕೆ ಬೇಕಿರುವ ಸಾಮಾಗ್ರಿಗಳೇನು ಎಂದು ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು :

* ಹಸಿ ಮಾವಿನಕಾಯಿ

* ಅಕ್ಕಿ

* ನೀರು

* ಎಣ್ಣೆ

* ಈರುಳ್ಳಿ

* ಹಸಿ ಮೆಣಸು

* ಶೇಂಗಾ

* ಕಡಲೆ ಬೇಳೆ

* ಉದ್ದಿನ ಬೇಳೆ

* ಉಪ್ಪು

* ಕರಿಬೇವು

* ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :
ಮೊದಲು ಅನ್ನ ಮಾಡಿಡಿ. ನಂತರಮಾವಿನ ಕಾಯಿ ಸೊಪ್ಪೆ ಸುಲಿದು ತುರಿದಿಡಿ. ಈಗ ಈರುಳ್ಳಿ, ಹಸಿ ಮೆಣಸು ಕತ್ತರಿಸಿ ಇಡಿ. ನಂತರ ಪ್ಯಾನ್‌ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದ ಮೇಲೆ ಕಡಲೆ ಬೀಜ , ಉದ್ದು, ಶೇಂಗಾ ಬೀಜ ಹಾಕಿ ಒಂದೆರಡು ನಿಮಿಷ ಹುರಿತಯಿರಿ, ನಂತರ ಕರಿಬೇವು, ಈರುಳ್ಳಿ, ಹಸಿ ಮೆಣಸು ಹಾಕಿ. ಈರುಳ್ಳಿ ಸ್ವಲ್ಪ ಫ್ರೈ ಮಾಡಿ ನಂತರ ತುರಿದ ಮಾವಿನಕಾಯಿ ತುರಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ ಪುಡಿ ಹಾಕಿ ಬೇಯಿಸಿ ನಂತರ ಅನ್ನಕ್ಕೆ ಬೆರೆಸಿದರೆ ರುಚಿಯಾದ ಮಾವಿನಕಾಯಿ ಚಿತ್ರಾನ್ನ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!