Monday, October 2, 2023

Latest Posts

BREAKFAST| ಬರೀ ಓಟ್ಸ್‌ ತಿನ್ಬೇಕಾ… ಬೇಡಾ, ಓಟ್ಸ್‌ ಇಡ್ಲಿ ಮಾಡಿ ಸವಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಡಯಟ್‌ ಮಾಡುವವರು ಬರೀ ಓಟ್ಸ್‌ ತಿನ್ಬೇಕಾ ಅಂತ ಯೋಚಿಸ್ತಿರ್ತಾರೆ. ಆದರೆ ಬರೀ ಓಟ್ಸ್‌ ತಿನ್ಬೇಕು ಅಂತೇನಿಲ್ಲ, ಓಟ್ಸ್‌ನಿಂದ ಹಲವಾರು ಖಾದ್ಯಗಳನ್ನು ಮಾಡಿ ತಿನ್ನಬಹುದು. ಹಾಗಾಗಿ ಒಮ್ಮೆ ಓಟ್ಸ್‌ ಇಡ್ಲಿ ಮಾಡಿ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು:

*ಓಟ್ಸ್
*ಉದ್ದಿನ ಬೇಳೆ
*ಉಪ್ಪು
*ಶುಂಠಿಯ ಪೇಸ್ಟ್
*ಹಸಿಮೆಣಸಿನ ಪೇಸ್ಟ್
*ಎಣ್ಣೆ
*ನೀರು

ಮಾಡುವ ವಿಧಾನ:

* ಓಟ್ಸ್ ಮತ್ತು ಒಣ ಉದ್ದಿನ ಬೇಳೆಯನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಪುಡಿಮಾಡಿ.
* ಇದಕ್ಕೆ ನೀರು ಹಾಕಿ ಕಲಕಿ ನುಣ್ಣನೆಯ ಮಿಶ್ರಣ ಮಾಡಿ. ಇದಕ್ಕೆ ಉಪ್ಪು ಮತ್ತು ಹಸಿಮೆಣಸಿನ ಪೇಸ್ಟ್ ಸೇರಿಸಿ ಕಲಕಿ, ಇಡ್ಲಿಹಿಟ್ಟಿನ ಹದಕ್ಕೆ ತರಬೇಕು.
* ಸುಮಾರು ಒಂದು ಗಂಟೆ ನೆನೆಸಿಡಿ, ಬಳಿಕ ಇಡ್ಲಿಪಾತ್ರೆಯ ಲೋಟ (ಅಥವಾ ಅಚ್ಚು) ಗಳ ಒಳಭಾಗಕ್ಕೆ ಕೊಂಚ ಎಣ್ಣೆ ಸವರಿ ಪ್ರತಿ ಅಚ್ಚಿನಲ್ಲಿಯೂ ತುಂಬುವಷ್ಟು ಹಿಟ್ಟನ್ನು ತುಂಬಿ.
* ನಂತರ ಇಡ್ಲಿಗಳನ್ನು ಇಡ್ಲಿಪಾತ್ರೆಯಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷಗಳವರೆಗೆ ಹಬೆಯಲ್ಲಿ ಬೇಯಿಸಿ.
* ಅಚ್ಚುಗಳಿಂದ ಹೊರತೆಗೆದ ಇಡ್ಲಿಗಳನ್ನು ಬಿಸಿಬಿಸಿಯಿರುವಂತೆಯೇ ತಿನ್ನಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!