BREAKFAST| ರಜೆದಿನ ಸವಿಯಿರಿ ವಿಶೇಷವಾದ ಈರುಳ್ಳಿ ಪರೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೋಧಿಯಿಂದ ಮಾಡಲಾಗುವ ವಿವಿಧ ರೀತಿಯ ಪರೋಟವನ್ನು ತಿಂದಿರುತ್ತೀರಿ. ಆದರೆ ಎಂದಾದರೂ ಈರುಳ್ಳಿ ಪರೋಟ ಸವಿದಿದ್ದೀರಾ ? ಇಲ್ಲ ಎಂದಾದ್ರೆ ಒಮ್ಮೆ ಈ ಈರುಳ್ಳಿ ಪರೋಟ ರೆಸಿಪಿ ಮನೆಯಲ್ಲಿ ಟ್ರೈ ಮಾಡಿ ಆನಂದಿಸಿ.

ಬೇಕಾಗುವ ಪದಾರ್ಥಗಳು:

ಗೋಧಿ ಹಿಟ್ಟು
ಉಪ್ಪು
ಎಣ್ಣೆ
ನೀರು

ಈರುಳ್ಳಿ ಸ್ಟಫಿಂಗ್ ಮಾಡಲು ಬೇಕಾದ ಪದಾರ್ಥಗಳು:

ಸಣ್ಣಗೆ ಹೆಚ್ಚಿದ ಈರುಳ್ಳಿ
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
ಗರಂ ಮಸಾಲೆ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ:

* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟು ಹಾಕಿ, ಎಣ್ಣೆ, ಉಪ್ಪು ಹಾಗೂ ಚಪಾತಿ ಹಿಟ್ಟಿನ ಹದಕ್ಕೆ ತರಲು ಬೇಕಾಗುವಷ್ಟು ನೀರು ಸೇರಿಸಿ ಮೃದುವಾಗಿ ಬೆರೆಸಿಕೊಳ್ಳಿ.
* ಹಿಟ್ಟನ್ನು ಮುಚ್ಚಿ 20-30 ನಿಮಿಷ ತೆಗೆದಿಡಿ.
* ಈ ನಡುವೆ ನೀವು ಈರುಳ್ಳಿ ಸ್ಟಫಿಂಗ್ ಮಾಡಬೇಕು. ಅದಕ್ಕಾಗಿ ಇನ್ನೊಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಈರುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ.
* ಈಗ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ತಯಾರಿಸಿ, ಸುಮಾರು 3-4 ಇಂಚಿನಷ್ಟು ವ್ಯಾಸ ಬರುವಂತೆ ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ.
* ಅದರ ನಡುವೆ ಹೆಚ್ಚಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಮಿಶ್ರಣವನ್ನು 1-2 ಟೀಸ್ಪೂನ್‌ನಷ್ಟು ಇಟ್ಟು, ಅದರ ಮೇಲೆ ಚಿಟಿಕೆ ಗರಂ ಮಸಾಲೆ ಪುಡಿ, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ.
* ಈಗ ಹಿಟ್ಟಿನ ಅಂಚುಗಳನ್ನು ಜೋಡಿಸಿ, ಅದರ ಮಧ್ಯದಲ್ಲಿ ಒತ್ತಿ ಮತ್ತೆ ಚೆಂಡನ್ನಾಗಿ ಮಾಡಿ.
* ಈಗ ಸುಮಾರು 5-8 ಇಂಚು ವ್ಯಾಸಕ್ಕೆ ಬರುವಂತೆ ಲಟ್ಟಣಿಗೆ ಸಹಾಯದಿಂದ ಸುತ್ತಿಕೊಳ್ಳಿ.
* ಇಗ ತವಾವನ್ನು ಬಿಸಿ ಮಾಡಿ ಪರೋಟವನ್ನು ಅದರಲ್ಲಿಟ್ಟು ಎರಡೂ ಬದಿ ಸಮವಾಗಿ ಬೇಯಿಸಿಕೊಳ್ಳಿ. ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಹಚ್ಚಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ.

ಇದೀಗ ಈರುಳ್ಳಿ ಪರೋಟ ತಯಾರಾಗಿದ್ದು, ಉಪ್ಪಿನಕಾಯಿ, ಮೊಸರು ಅಥವಾ ಯಾವುದಾದರೂ ಗ್ರೇವಿಯೊಂದಿಗೆ ಸವಿಯಿರಿ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!