RECIPE | ಒಮ್ಮೆಯಾದ್ರು ಮಾಡಿ ನೋಡಿ ಅವಲಕ್ಕಿ ರೊಟ್ಟಿ ರೆಸಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಕ್ಕಿ ರೊಟ್ಟಿ, ಮಸಾಲ ರೊಟ್ಟಿ, ಜೋಳದ ರೊಟ್ಟಿ ಹೀಗೆ ಹಲವಾರು ರೀತಿಯ ರೊಟ್ಟಿಯನ್ನು ಸವಿದಿರುತ್ತೀರಿ. ಆದರೆ ಒಮ್ಮೆಯಾದ್ರೂ ಅವಲಕ್ಕಿ ರೊಟ್ಟಿ ಹೇಗಿರತ್ತೆ ಅಂತ ತಿಂದು ನೋಡಿದ್ದೀರಾ ? ಇಲ್ಲಾಂದ್ರೆ ಮತ್ಯಾಕೆ ತಡ ಮನೆಯಲ್ಲೊಮ್ಮೆ ಟ್ರೈ ಮಾಡಿ ನೋಡಿ ಅವಲಕ್ಕಿ ರೊಟ್ಟಿ ರೆಸಿಪಿ.

ಬೇಕಾಗುವ ಪದಾರ್ಥಗಳು:

ತೆಳು ಅವಲಕ್ಕಿ
ಅಕ್ಕಿ ಹಿಟ್ಟು
ಈರುಳ್ಳಿ
ಕರಿಬೇವಿನ ಎಲೆಗಳು
ಕೊತ್ತಂಬರಿ ಸೊಪ್ಪು
ಶುಂಠಿ
ಮೆಣಸಿನಕಾಯಿ
ಜೀರಿಗೆ
ಉಪ್ಪು
ಬಿಸಿ ನೀರು
ಎಣ್ಣೆ

ಮಾಡುವ ವಿಧಾನ:

  • ಒಂದು ಬಟ್ಟಲಿನಲ್ಲಿ ಅವಲಕ್ಕಿ ತೆಗೆದುಕೊಂಡು ನೀರು ಹಾಕಿ ತೊಳೆದು, ಮತ್ತೊಂದು ಬಟ್ಟಲಿಗೆ ಹಾಕಿಡಿ.
  • ಈಗ ಅದಕ್ಕೆ ಅಕ್ಕಿ ಹಿಟ್ಟು, ಈರುಳ್ಳಿ, ಕರಿಬೇವು ಮತ್ತು ಕೊತ್ತಂಬರಿ ಸೇರಿಸಿ ಬೆರೆಸಿ. ಶುಂಠಿ, ಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ. ಇದಕ್ಕೆ ಬಿಸಿ ನೀರನ್ನು ಸೇರಿಸಿ, ತಟ್ಟಲು ಸರಿಹೊಂದುವಷ್ಟು ಪ್ರಮಾಣ ಹಿಟ್ಟನ್ನು ತಯಾರಿಸಿ.
  • ಈಗ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ತೆಳುವಾಗಿ ತಟ್ಟುತ್ತಾ ಬನ್ನಿ. ತಟ್ಟಿದ ರೊಟ್ಟಿಯನ್ನು ಬಿಸಿ ತವಾದ ಮೇಲೆ ಹಾಕಿ ಬೇಯಿಸಿ.
  • ಅಂತಿಮವಾಗಿ ಪಲ್ಯ ಅಥವಾ ಚಟ್ನಿಯೊಂದಿಗೆ ಅವಲಕ್ಕಿ ರೊಟ್ಟಿ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!