Sunday, December 3, 2023

Latest Posts

RECIPE| ಆರೋಗ್ಯಕರ ಆಲೂಗೆಡ್ಡೆ ಮತ್ತು ಬೆಳ್ಳುಳ್ಳಿ ಸಲಾಡ್ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು

*ಬೆಳ್ಳುಳ್ಳಿ
*ಲಿಂಬೆ ರಸ
*ಮೊಸರು
*ಮಿಲ್ಕ್ ಪೌಡರ್
*ಮಸ್ಟರ್ಡ್ ಪೌಡರ್
*ಕರಿಮೆಣಸಿನ ಹುಡಿ
*ಪಾಲಾಕ್
*ಆಲೂಗಡ್ಡೆ
*ಉಪ್ಪು

ಮಾಡುವ ವಿಧಾನ

* ಮೊದಲು ಎಲ್ಲಾ ಸಾಮಾಗ್ರಿಗಳನ್ನು ಪಾತ್ರೆಯಲ್ಲಿ ಮಿಶ್ರ ಮಾಡಿಕೊಳ್ಳಬೇಕು. ನಂತರ ಮೃದುವಾಗಿ ಹಿಸುಕಿಕೊಳ್ಳಿ.
* ಈಗ ಪಾಲಾಕ್ ಅನ್ನು ಐಸ್ ವಾಟರ್‌ನಲ್ಲಿ ಇರಿಸಿ. ನಂತರ ನೀರನ್ನು ಚೆಲ್ಲಿ, ಇದನ್ನು 15 ನಿಮಿಷಗಳ ಕಾಲ ಸೊಪ್ಪು ಮೃದುವಾಗುವವರೆಗೆ ಸ್ಟೋರ್ ಮಾಡಿ.
* ಈಗ ಬೇಯಿಸಿದ ಆಲೂಗಡ್ಡೆಗಳನ್ನು ಫ್ಲಾಟ್ ಸ್ಪೂನ್‌ನಲ್ಲಿ ಹಿಸುಕಿ ಸಿಪ್ಪೆ ತೆಗೆದು ಪಾಲಾಕ್‌ನೊಂದಿಗೆ ಮಿಶ್ರ ಮಾಡಿ.
* ಈ ಸಾಮಾಗ್ರಿಗೆ ಸ್ವಲ್ಪ ಉಪ್ಪು ಹಾಕಿ.
* ತದನಂತರ ಮೇಲೆ ತಿಳಿಸಿರುವ (ಮಿಶ್ರ ಮಾಡಿಕೊಂಡ ಎಲ್ಲಾ ಸಾಮಾಗ್ರಿಗಳನ್ನು) ಇದಕ್ಕೆ ಮಿಕ್ಸ್ ಮಾಡಿಕೊಳ್ಳಿ. ಈಗ ರುಚಿಯಾದ ಹಾಗೂ ಆರೋಗ್ಯಕರವಾದ ಆಲೂಗೆಡ್ಡೆ ಮತ್ತು ಬೆಳ್ಳುಳ್ಳಿ ಸಲಾಡ್ ಸವಿಯಲು ಸಿದ್ಧ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!